Wednesday, October 28, 2009

ನಮ್ಮ ಸಾಹಸ ಯಾತ್ರೆ - ಭಾಗ -೮ - ಘಟ್ಟದ ಮೇಲೆ

ಹೀಗೆ ಘಟ್ಟದ ತುದಿ ತಲುಪುವಷ್ಟರಲ್ಲಿ ಮಧ್ಯಾಹ್ನ ಒಂದೂ ಹತ್ತಾಗಿತ್ತು. ಎದುರಿಗೆ ರುದ್ರ ರಮಣೀಯ ದೃಶ್ಯ ಕಣ್ಣಿಗೆ ಬೀಳುತ್ತಿತ್ತು. ನಾವು ಮರದ ತಂಪಲು ಹುಡುಕಿ ಅಲ್ಲಿ ಕುಳಿತುಕೊಂಡೆವು. ನದಿಯು ಮಹಾಸಾಗರದಂತೆ ಹರಡಿಕೊಂಡಿತ್ತು. ಮದ್ಯೆ ಒಂದೆರಡು ದ್ವೀಪ ಕಾಣುತ್ತಿದ್ದವು. ಘಟ್ಟದ ಮೇಲೆ ಕುಳಿತು ಚಪಾತಿ ಖಾಲಿ ಮಾಡತೊಡಗಿದೆವು. ಬರುತ್ತಾ ಇಷ್ಟು ಚಪಾತಿ ಏಕೆ ನಾವೇನು ಕಾಶಿ, ರಾಮೇಶ್ವರಕ್ಕೆ ಹೊರಟಿದ್ದೆವೇನುಎಂದು ಅಜ್ಜಿಯನ್ನು ಬಯುತ್ತಾ ಚಪಾತಿ ತಂದಿದ್ದೆವು. ಈಗ ನೋಡಿದರೆ ತಂದಿದ್ದು ಸಾಲುವುದಿಲ್ಲವೇನೋ ಅನ್ನಿಸುವಷ್ಟು ಹಸಿವಾಗಿತ್ತು. ಚಪಾತಿ ಜೊತೆ ನೆಂಜಿಕೊಳ್ಳಲು ಹಾಕಿದ್ದ ತುಪ್ಪ, ಸಕ್ಕರೆ, ಚಟ್ನಿ ಇತ್ಯಾದಿಗಳು ಬಹಳ ರುಚಿಯಾಗಿ ಕಂಡು ಬಂತು. ರಾಘುಶರತ್ ನೀರನ್ನು ಅರಸಿ ಘಟ್ಟ ಇಳಿಯತೊಡಗಿದರು. ನಾವು ತಂದಿದ್ದ ನೀರೆಲ್ಲಾ ಖಾಲಿಯಾಗಿ ಅಬ್ಬಿ ನೀರನ್ನು ಅರಸಿ ಅವರು ಹೋಗಿದ್ದರು. ಅರುಣ ಒಂದು ಮರದ ಬುಡದಲ್ಲಿ ಬಿದ್ದುಕೊಂಡಿದ್ದ. ನಾನು ಒಂದು ಬಂಡೆಗೆ ಒರಗಿಕೊಂಡು ನದಿಯ ಸುನ್ದರ್ಯ ವನ್ನು ಅಸ್ವಾದಿಸುತ್ತಿದ್ದೆಆ ಬಿರು ಬಿಸಿಲಲ್ಲಿ ಯಾವ ಪ್ರಾಣಿ, ಪಕ್ಷಿಗಳೂ ಕಂಡು ಬರಲ್ಲಿಲ್ಲ. ಎರಡು ಮೂರು ಹದ್ದುಗಳು ಆಹಾರಕ್ಕಾಗಿ ಆಕಾಶದಲ್ಲಿ ಸುತ್ತು ಹೊಡೆಯುತ್ತಿದ್ದವು. ನಾನು ಹಾಗೆ ನಿದ್ದೆ ಹೋದೆ. ಶರತ್, ರಾಘು ಬಂದು ಎಬ್ಬಿಸಿದರು. ಆಗ ಗಂಟೆ ಎರಡೂವರೆಯಾಗಿತ್ತು ಒಂದೆರಡು ಸೌತೆಕಾಯಿ ಹೆಚ್ಚಿದ್ದರು. ಅದಕ್ಕೆ ಉಪ್ಪು, ಮೆಣಸಿನ ಕಾಯಿ, ನಿಂಬೆ ರಸ ಬೆರೆಸಿ ನೆಂಜಿಕೊಳ್ಳಲು ಉಪ್ಪು ಕಾರ ತಯಾರಿಸಿದ್ದರು. ನಾನು, ಅರುಣ ಎದ್ದು ಸೌತೆ ಕಾಯಿtಇನ್ದೆವು . ಸ್ವಲ್ಪ ಹೊತ್ತು ವಿಶ್ರಾಂತಿಯ ನಂತರ ಪ್ರಯಾಣ ಮುಂದುವರೆಸಿದೆವು.

ಮುಂದಿನ ಭಾಗದಲ್ಲಿ - ನದಿಯ ಕಡೆಗೆ.

2 comments:

  1. ಸ್ವಲ್ಪ ಜಾಸ್ತಿ ಜಾಸ್ತಿ ಬರೀರಿ ಸರ್,
    ಕನ್ನಡ ಧಾರಾವಾಹಿ ತರ ಎಳಿತಾ ಇದಿರಾ :)
    ಕುತೂಹಲ ಬೇಗ ತಣಿಸಿ

    ReplyDelete
  2. Weekdays ಬರಿಯೋದು ಸ್ವಲ್ಪ ಕಷ್ಟ. ದಾರಾವಾಹಿ ತರ ಎಳೆಯೋಲ್ಲ ಬಿಡಿ. :) ಬೇಗ ಮುಗಿಸುತ್ತೇನೆ.

    ReplyDelete