Saturday, December 5, 2009

Sunday, November 29, 2009

Munnar boats

ಇದೆ ತರ boat ಗಳ ಚಿತ್ರ ಈ ಹಿಂದೆ ಹಾಕಿದ್ದೆ. ಅದರ link

Wednesday, November 18, 2009

ನಮ್ಮ ಸಾಹಸ ಯಾತ್ರೆ - ಭಾಗ - ೧೪ - ಮನೆಯ ದಾರಿ

ನಾವು ಆ ದಿನವೇ ಮನೆಗೆ ಹಿಂದ್ಹಿರುಗುತ್ತೇವೆ ಎಂದು ಅವರಿಗೆ ತಿಳಿಸಿದೆವು. ಅವರ ತೀರ ಒತ್ತಾಯದಿಂದ ಒಂದು ದಿನವಿಡೀ ಅಲ್ಲಿ ಇರಬೇಕಾಗಿ ಬಂತು. ಸಂಜೆ ತಾನು ತಿರುಗಾಡಲು ಕರೆದುಕೊಂಡು ಹೋಗುತ್ತೇನೆಂದು ಅವರು ತಿಳಿಸಿದರು. ಮಧ್ಯಾನ ಒಂದು ನಿದ್ದೆ ತೆಗೆದ ಮೇಲೆ ಅವರ ಜೊತೆ ನಾವು ಹೊರಟೆವು. ಅರುಣ ತನ್ನ ಕೈಯಲ್ಲಿ ನಡೆಯಲು ಆಗುವುದಿಲ್ಲ ಎಂದು ಮನೆಯಲ್ಲೇ ಉಳಿದ. ನಮ್ಮ ಜೊತೆ ಬಂದವರ ಕೈಯಲ್ಲಿ ಬೆಣಚು ಕಲ್ಲಿನ ಉಂಡೆಯೊಂದಿತ್ತು. ನಾವು ಅದನ್ನು ಯಾಕೆ ಎಂದು ಕೇಳಿದಾಗ ಅದು ಹಂದಿಯನ್ನು ಸಾಯಿಸುವುದಕ್ಕೆ ಎಂದು ತಿಳಿಸಿದರು. ಆ ಉಂಡೆಯನ್ನು ಯಾವುದೋ ಬಾಲೆ ಗಿಡಕ್ಕೆ ಕಟ್ಟಿದರು. ಬಾಳೆಗಿಡ ಅಗೆಯಲು ಬಂದ ಹಂದಿ ಅದನ್ನೂ ಅಗೆದು ಉಂಡೆ ಸಿಡಿದು ಸ್ಥಳದಲ್ಲೇ ಸಾಯುತ್ತದೆಂದು ತಿಳಿಸಿದರು. ನಾವು ಕುತೂಹಲದಿಂದ ನೋಡಿದೆವು.
ಬರುತ್ತಾ ಅವರು ದೂರದಿಂದ ಕಾಟಿಗಳ ಗುಂಪೊಂದನ್ನು ತೋರಿಸಿದರು. ಗುಂಪಿನಲ್ಲಿರುವ ಕಾಡುಕೋಣ ಗಳಿಂದ ಯಾವುದೇ ಭಯವಿಲ್ಲವೆಂದೂ, ಒಂಟಿಯಾಗಿದ್ದರೆ ಮಾತ್ರ ಅಪಾಯವೆಂದೂ ತಿಳಿಸಿದರು. ಆ ರಾತ್ರೆಯಿಡಿ ನಮಗೆ ಕಾಡುಕೋಣದ್ದೇ ಕನಸು.
ಈ ದಿನ ಅರುಣನನ್ನು ನನ್ನ ಪಕ್ಕ ಮಲಗಿಸಿಕೊಳ್ಳದೆ ರಾಘುವಿನ ಬದಿಯಲ್ಲಿ ಮಲಗಿಸಿದೆ. ಆದರೆ ಅರುಣ ಒದ್ದರೂ ರಾಘುವಿಗೆ ಎಚ್ಹ್ಚ್ರವಾಗಲ್ಲಿಲ್ಲವಂತೆ. ರಾತ್ರೆ ಢಂ ಎಂದು ಶಬ್ದ ಕೇಳಿತು. ನಾನು ಹಂದಿ ಸತ್ತಿರಬಹುದು ಎಂದುಕೊಂಡು ಮಗ್ಗುಲಾಗಿ ಮಲಗಿದೆ.
ಬೆಳಗ್ಗೆ ಗಡದ್ದಾಗಿ ತಿಂಡಿ ತಿಂದುಕೊಂಡು ವಾಪಾಸು ಹೊರಟೆವು. ಹಿಂದಿನ ದಿನ ಮಂಕಾಗಿದ್ದ ಅರುಣ ಹುರುಪಿನಿಂದ ಹೊರಟ. ಅದನ್ನು ಕಂಡು ನನಗೆ ಸಂತೋಷವಾಯಿತು. ನಾನು ಮನೆಯವರಿಗೆ ತುಂಬು ಕೃತಜ್ಞತೆ ಅರ್ಪಿಸಿದೆವು. ಅವರು ಮುಂದಿನ ರಜಕ್ಕೆ ಮತ್ತೆ ಬರುವಂತೆ ಹೇಳಿದರು. ಅವರು ಸ್ವಲ್ಪ ದೂರ ಬಂದು ದಾರಿ ತೋರಿಸಿ ಬೀಳ್ಕೊಟ್ಟರು. ಅವರು ತೋರಿಸಿದ ದಾರಿ ನಮ್ಮನ್ನು ಘಟ್ಟಕ್ಕೆ ಕರೆದೊಯ್ಯಲಿತ್ತು. ದಾರಿಯ ಮದ್ಯೆ ನಮಗೆ ತಿನ್ನಲಿಕ್ಕೆ ಕುಟ್ಟವಲಕ್ಕಿ ಮಾಡಿ ಕೊಟ್ಟಿದ್ದರು. ಮದ್ಯೆ ದಾರಿಯಲ್ಲಿ ಹಂದಿ ಸತ್ತಿದೆಯೇ ಎಂದು ನೋಡಿದೆವು. ಅಲ್ಲೆಲ್ಲೂ ಕಾಡು ಹಂದಿಯ ಸುಳಿವಿರಲ್ಲಿಲ್ಲ. ಕೊನೆಗೆ ಒಂದು ಕಡೆ ಕಾಲುದಾರಿಯ ಪಕ್ಕ ಕಾಡು ಹಂದಿಯೊಂದು ಮುಸುಡು ಒಡೆದುಕೊಂಡು ಸತ್ತು ಬಿದ್ದಿತ್ತು. ಕುಟುಕು ಜೀವವನ್ನು ಹಿಡಿದುಕೊಂಡು ಇಷ್ಟು ದೂರ ಬಂದ ಹಂದಿ ನೋಡಿ ನಮಗೆ ಆಶ್ಚರ್ಯವಾಯಿತು.
ನಾವು ಘಟ್ಟವನ್ನು ಹತ್ತಿದಾಗ ಮಧ್ಯಾಹ್ನ ಎರಡು ಗಂಟೆ. ಈ ಭಾರಿ ನಾವು ಇಳಿದ್ದಿದ್ದ ಘಟ್ಟವಲ್ಲದೆ ಪಕ್ಕದ ಘಟ್ಟ ಹತ್ತಿದ್ದೆವು. ಈ ಘಟ್ಟ ದಲ್ಲಿ ಅಷ್ಟೊಂದು ನೆರಳಿಲ್ಲದಿದ್ದರಿಂದ ಘಟ್ಟದಿಂದ ಸ್ವಲ್ಪ ಕೆಳಗೆ ಹೋಗಿ ವಿಶ್ರಮಿಸಿಕೊಂಡೆವು. ಕುಟ್ಟ ವಲಕ್ಕಿ ಖಾಲಿಯಾದ ಮೇಲೆ ಮೂರು ಗಂಟೆ ಯವರೆಗೂ ನಾನು ನದಿಯ ಸೌಂದರ್ಯ ವನ್ನು ಆಸ್ವಾದಿಸಿದೆ. ಕೊನೆಗೆ ಮನೆಯತ್ತ ಸಾಗತೋಡಗಿದಂತೆ ಒಂದು ತರ ಖುಶಿಯಾಗತೊಡಗಿತು. ಯಾವುದೋ ಕಲ್ಪನಾ ಪ್ರಪಂಚದಿಂದ ವಾಸ್ತವದೆಡೆಗೆ ಬಂದಂತೆ ಅನಿಸಿತು. ಶರತ್ ಈ ಮದ್ಯೆ ಏನನ್ನೋ ಗುರುತಿಸಿದ. ಅದು ಮುಳ್ಳು ಹಂದಿಯ ಮುಳ್ಳಗಿತ್ತು. ಅದರ ಗಾತ್ರ ನೋಡಿ ನಾನು ಸೋಜಿಗ ಪಟ್ಟೆ.
ಬರುವಾಗ ನಾವು ಅಬ್ಬಿ ನೀರಿನ ಹಳ್ಳ ಗುರುತಿಸಿದೆವು. ಅದರ ತುಂಬಾ ಜರಿ ಗಿಡ ತುಂಬಿಕೊಂಡಿತ್ತು. ಅದರಿಂದ ನೀರು ಶುಧ್ಧವಾಗಿರುತ್ತದೆ ಎಂದು ಅಜ್ಜ ಆಮೇಲೆ ಹೇಳಿದರು. ನೇರವಾಗಿ ಘಟ್ಟ ಇಳಿದ ಮೇಲೆ ಒಂದು ಸಣ್ಣ ಗುಡ್ಡ ಸಿಗುತ್ತದೆ. ಅದನ್ನು ದಾಟಿದರೆ ನಮ್ಮ ಅಜ್ಜನ ಮನೆ. ಮನೆ ತಲಪುವಷ್ಟರಲ್ಲಿ ಸಂಜೆ ಆರೂ ಮುಕ್ಕಾಲು. ನಾವೆಲ್ಲರೂ ಸುಸ್ತಾಗಿದ್ದೆವು. ಬೇಗ ಊಟ ಮಡಿ ಮಲಗಿದೆವು. ರಾತ್ರೆಯಿಡಿ ಘಟ್ಟದ್ದೆ ಕನಸು !

ಮುಗಿಯಿತು.

Sunday, November 8, 2009

ನಮ್ಮ ಸಾಹಸ ಯಾತ್ರೆ - ಭಾಗ - ೧೩- ಗುಹೆಯಲ್ಲಿ ಒಂದು ರಾತ್ರಿ

ನಾವು ಗುಹೆ ಹೊಕ್ಕುತ್ತಿದ್ದಂತೆ ಅವಾಂತರವೊಂದು ಎದುರಾಯ್ತು. ಒಂದು ನರಿಯು ಆ ಗುಹೆಯಲ್ಲಿ ಮನೆ ಮಾಡಿಕೊಂಡಿತ್ತು ಅಂತ ಅನ್ನಿಸುತ್ತೆ. ಅದು ಸೀದಾ ನಮ್ಮ ಮೇಲೆ ಹಾರಿಕೊಂಡು ಹೊರಗೆ ಹೋಯಿತು. ಗುಹೆಲ್ಲಿ ನಾಲ್ಕು ಜನ ಕೂತು ಕೊಳ್ಳುವಷ್ಟು ಜಾಗ ಧಾರಾಳವಾಗಿತ್ತು . ನಾನು, ರಾಘು ರಾತ್ರಿಯಿಡೀ ಉರಿಸಲು ಕಟ್ಟಿಗೆಯನ್ನು ತರಲು ಹೋದೆವು. ಅದೃಷ್ಟವಶಾತ್ ರಾಘು ಮನೆಗೆ ಹಿಂದಿರುಗಿದ್ದವನು ತನ್ನ ಚೀಲ ತಂದಿದ್ದ. ಅವನ ಚೀಲದಲ್ಲಿ ಒಂದಿಷ್ಟು ಬಟ್ಟೆ, ಸೋಪು, ಬೆಂಕಿ ಪೊಟ್ಟಣ, ಟಾರ್ಚ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇತ್ಯಾದಿಗಳಿದ್ದವು. ಅವನು ಸ್ಕೌಟ್ ಸೇರಿದ್ದರಿಂದ ಇವುಗಳನ್ನೆಲ್ಲ ಆತ ಮೊದಲೇ ಇಟ್ಟುಕೊಂಡಿದ್ದ. ನಾವು ಒಂದಿಷ್ಟು ಕಾಡಿನ ಹನ್ನುಗನ್ನು, ಸಿಹಿ ಗೆಣೆಸನ್ನುಒಟ್ಟು ಮಾಡಿ ತಂದೆವು. ವಾಪಸು ಗುಹೆಗೆ ಬರುವಷ್ಟರಲ್ಲಿ ಕತ್ತಲಾಗಿತ್ತು. ಶರತ್, ಅರುಣ ಆ ಮನೆಯವರು ನಮ್ಮನ್ನು ಹುಡುಕ್ಕುತ್ತಿರಬಹುದೇ ಎಂದು ಮಾತನಾಡುತ್ತಿದ್ದರು. ರಾಘು ಅಗ್ಗಿಷ್ಟಿಕೆ ರೆಡಿ ಮಾಡಿದ. ನಾವೆಲ್ಲರೂ ಸುತ್ತಲೂ ಕುಳಿತು ಅದೂ, ಇದೂ ಮಾತನಾಡಿಕೊಂಡೆವು. ರಾಘು ತನ್ನ ಸ್ಕೌಟ್ ಜೀವನದ ಅನುಭವಗಳನ್ನು ತಿಳಿಸಿದ. ದೂರದಲ್ಲೆಲ್ಲೋ ನರಿ ಕೂಗುತ್ತಿತ್ತು. ನಾವು ಗೆಣೆಸನ್ನು ಬೇಯಿಸಿಕೊಂಡು ತಿಂದೆವು. ಅರುಣ ಸುಸ್ತಾಗಿ ಮಲಗಿ ಬಿಟ್ಟ. ನಾನು ಮೂವರು ಸರದಿ ಪ್ರಕಾರ ಬೆಂಕಿ ಉರಿಯುವಂತೆ ನೋಡಿಕೊಳ್ಳಬೇಕು ಎಂದು ನಿರ್ಧಾರವಾಯಿತು. ಮದ್ಯೆ ಬೆಂಕಿ, ಸುತ್ತಲೂ ನಾವು ನಾಲ್ವರು. ಎಲ್ಲರ ಮುಖದ ಮೇಲೆ ಬೆಂಕಿಯಾ ಬೆಳಕು ಕುಣಿಯುತ್ತಿತ್ತು. ನನಗೆ ನಾವು ಯಾವುದೋ ಹೊಸ ಪ್ರಪಂಚಕ್ಕೆ ಬಂದಂತೆ ಅನ್ನಿಸಿತು. ಈ ಲೋಕಕ್ಕೆ ನಮಗೆ ಇದ ಒಂದೇ ಒಂದು ಅರಿವು ಎಂದರೆ ದೂರದಲ್ಲೆಲ್ಲೋ ಕೂಗುತ್ತಿದ್ದ ಕಾಡಿನ ಹಕ್ಕಿ, ಜೀರುಂಡೆಗಳು. ಆ ರಾತ್ರೆಯನ್ನು ಮಾತ್ರ ನಾನೆಂದೂ ಮರೆಯಲಾರೆ.
ಬೆಳಗ್ಗೆ ಚಳಿಯಿಂದ ಎಚ್ಚರಾಯಿತು. ರಾತ್ರೆ ಶರತ್ ತನ್ನ ಸರದಿ ಬಂದಾಗ ನಿದ್ದೆ ತಡೆಯಲಾರದೆ ಮಲಗಿಬಿಟ್ಟಿದ್ದ. ಇನ್ನೂ ಬೆಳಕು ಮೂಡಿರಲ್ಲಿಲ್ಲಬೆಂಕಿ ನಂದಿ ಹೋಗಿ ಕೆಂಡ ಉಳಿದಿತ್ತು. ನಾನು ಕತ್ತಲಲ್ಲೇ ಬೆಂಕಿ ಪೊಟ್ಟಣ ಹುಡುಕಿ ಬೆಂಕಿ ರೆಡಿ ಮಾಡಿದೆ. ಸಮಯ ಇನ್ನು ಬೆಳಗ್ಗೆ ನಾಲ್ಕು ಐವತ್ತಾಗಿತ್ತು. ನಾನು ಮತ್ತೆ ಮಲಗಿದೆ. ಕೊನೆಗೆ ಎದ್ದಾಗ ಸಮಯ ಆರೂವರೆ. ರಾಘು ಆಗಲೇ ಎದ್ದಿದ್ದ. ನಾನು ಎದ್ದು ಮುಖ ತೊಳೆದುಕೊಂಡು ಬಂದೆ. ಸುಮಾರು ಎಂಟು ಗಂಟೆಗೆ ನಮ್ಮ ಪ್ರಯಾಣ ಶುರುವಾಯಿತು. ನಾವು ದ್ವೀಪದ ದಡದಲ್ಲೇ ನಡೆಯುತ್ತಿದ್ದಾಗ ದೋಣಿ ಸಿಕ್ಕಿತು. ನಮಗೆಲ್ಲ ತುಂಬ ಸಂತೋಷವಾಯಿತು. ಒಂದೊಮ್ಮೆ ದೋಣಿ ಸಿಗದೇ ಹೋದರೆ ನಮ್ಮ ಗತಿ ಏನು? ನಾವು ಈ ದ್ವೀಪದಲ್ಲೇ ಬಂದಿಯಾಗುವ ಸಾಧ್ಯತೆಯನ್ನು ನಾನು ರಾಘುವಿಗೆ ಹೇಳಿದ್ದೆ. ಆತ ಹಾಗೇನಾದರು ಆದ್ರೆ ತಾನು ಈಜಿಕೊಂಡು ಹೋಗಿ ದೋಣಿಗೆ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳುತ್ತಿದ್ದ. ಅಷ್ಟು ದೂರ ಈಜುವುದು ಅಸಾದ್ಯ ಎಂದು ನನ್ನ ಭಾವನೆಯಾಗಿತ್ತು. ಈಗ ದೋಣಿ ಸಿಕ್ಕಿದ್ದು ಈ ದುಸ್ವಪ್ನಗಲಿಗೆಲ್ಲಾ ಕೊನೆ ಒದಗಿಸಿತ್ತು.

ಈ ಮದ್ಯೆ ಶರತ್ ಒಂದು ಬಳ್ಳಿ ನೋಡಿ ಹಾವು ಎಂದು ಹೆದರಿದ್ದ. ಕೊನೆಗೆ ಅದನ್ನು ಹತ್ತಿರ ಹೋಗಿ ನೋಡುವಷ್ಟರಲ್ಲಿ ಅದು ಒಂದು ದೊಡ್ಡ ಬಲ್ಲಿಯಾಗಿದ್ದು ಮರದ ತುಂಡಿಗೆ ಸುತ್ತಿಕೊಂಡಿತ್ತು. ಮರದ ಬಳ್ಳಿಯನ್ನು ಎಸೆದು ಬಳ್ಳಿಯನ್ನು ತೆಗೆದುಕೊಂಡು ಬಂದೆವು. ವಾಪಸು ಬರುವಾಗ ನನಗೆ ಹಿಂದಿನಂತೆ ಭಯವೇನೂ ಆಗಲಿಲ್ಲಾ. ಅವರ ಮನೆಗೆ ಹೋದಾಗ ಅವರು ನಾವು ವಾಪಾಸು ಮನೆಗೆ ಹೋದೆವೆಂದು ಯೋಚಿಸಿದ್ದರಂತೆ. ರಾಘು ನಾವು ಕಾಡಿನಲ್ಲಿ ದಿಕ್ಕು ತಪ್ಪಿ ಉಳಿಯಬೇಕಾಯಿತೆಂದು ರೈಲು ಬಿಟ್ಟ.
ಮುಂದಿನ ಭಾಗದಲ್ಲಿ : ಮನೆಯ ದಾರಿ.

Friday, November 6, 2009

ನಮ್ಮ ಸಾಹಸ ಯಾತ್ರೆ - ಭಾಗ - ೧೨ - ಧರೆಯ ಅಂಚಿನಲ್ಲಿ

ನನಗೆ ಹಸಿವಾಗತೊಡಗಿತು. ನಾವೆಲ್ಲರೂ ಆಹಾರವನ್ನು ಹುಡುಕಿಕೊಂಡು ಹೊರಟೆವು. ಅನೇಕ ತರಹದ ಹಣ್ಣುಗಳು ಸಿಕ್ಕಿದವು. ರಾಘು ಬರುತ್ತಾ ಉಳಿದಿದ್ದ ಸೌತೆಕಾಯಿಗಳನ್ನು ತಂದಿದ್ದ. ಎಲ್ಲವನ್ನೂ ಮುಗಿಸಿದ ಮೇಲೆ ಸುಮ್ಮನೆ ತಿರುಗಲು ಹೊರಟೆವು. ಇದುವರೆಗೂ ಸುಮ್ಮನೆ ಬರುತ್ತಿದ್ದ ಅರುಣ ಈಗ ತಲೆ ಹರಟೆ ಶುರು ಮಾಡಿದ್ದ. ಕೊನೆಗೆ ಹೀಗೆಲ್ಲ ಮಾಡಿದರೆ ಇಲ್ಲೇ ಬಿಟ್ಟು ಹೋಗುತ್ತೇವೆ ಎಂದು ಹೆದರಿಸಿದೆ. ನಾವು ದ್ವೀಪದಲ್ಲೆಲ್ಲ ಸುತ್ತು ಹೊಡೆಯುತ್ತಿದ್ದಂತೆ ನಿಜವಾಗಿಯೂದಾರಿ ತಪ್ಪಿ ಬಿಟ್ಟೆವು. ನನಗಂತೂ ವಿಪರೀತ ಗಾಬರಿಯಾಯಿತು.
ಇದರ ಮದ್ಯೆ ನಮಗೊಂದು ಎತ್ತರ ಧರೆ ಎದುರಾಯಿತು. ರಾಘು ಈ ತರಹದ ಸಮಸ್ಯೆ ಅರಿತವ ನಿಧಾನಕ್ಕೆ ಹತ್ತಿದ. ಧರೆ ತೀರ ಕಡಿದಾಗಿರಲ್ಲಿಲ್ಲವಾದರೂ ಸಣ್ಣ ಸಣ್ಣ ಕಲ್ಲುಗಳಿಂದ ತುಂಬಿತ್ತು. ರಾಘು ಮೇಲೆ ಹತ್ತಿದವನು ಅಲ್ಲಿಂದ ಸಣ್ಣ ಬಳ್ಳಿಯನ್ನು ಇಳಿಸಿದ. ಅದು ನಮಗೆ ಆಧಾರಕ್ಕೆ ಯಾವ ರೀತಿಯಿಂದಲೂ ಸಾಲದಿದ್ದರೂ ಧೈರ್ಯ ಕೊಡಲು ಸಾಕಾಗಿತ್ತು. ನಾನು ಕೆಳಗೆ ಇದ್ದು ಅರುಣನನ್ನು ಹತ್ತಿಸಿದೆ. ನಂತರ ಶರತ್ ಹತ್ತತೊಡಗಿದ. ಆತನ ಭಾರಕ್ಕೆ ಆ ಬಳ್ಳಿ ಹರಿದು ಶರತ್ ಜಾರತೊಡಗಿದ. ನಾನು ತಕ್ಷಣ ಆತ ತೊಟ್ಟಿದ್ದ ಹವಾಯಿ ಚಪ್ಪಲಿಯನ್ನ ಕೆಳಗೆ ಎಸೆಯುವಂತೆ ಹೇಳಿದೆ. ಅವನು ಆಗಲೇ ಆ ಕೆಲಸ ಮಾಡುತ್ತಿದ್ದ. ಕೊನೆಗೆ ಹೇಗೋ ಮತ್ತೆ ಹತ್ತುವಷ್ಟರಲ್ಲಿ ಶರತ್ ನ ಮೈ ಕೈ ತರಚಿ ರಕ್ತ ಒಸರುತ್ತಿತ್ತು. ನಾನು ಭಯದಿಂದ ಹತ್ತಿದೆ. ರಾಘು ಶರತ್ ಗೆ ಪ್ರಥಮ ಚಿಕಿತ್ಸೆ ಅಂತ ಏನೇನೋ ಹಚ್ಹಿದ್ದ. ಅದು ಉರಿಯುತ್ತ್ಇತ್ತು ಅಂತ ಅನ್ನಿಸುತ್ತೆ, ಶರತ್ ನ ಮುಖ ನೋಡಿ ಅಂದುಕೊಂಡೆ. ಧರೆ ಹತ್ತಿದ ಮೇಲೆ ಅರುಣ ತನಗೆ ನಡೆಯಲು ಆಗುತ್ತಿಲ್ಲವೆಂದು ಹೇಳತೊಡಗಿದ. ಕೊನೆಗೆ ನಾವು ಅರ್ಧ ಗಂಟೆ ವಿಶ್ರಮಿಸಿಕೊಂಡೆವು. ಸಂಜೆಯಾಗುತ್ತಿದ್ದಂತೆ ನಾವು ನಿಲ್ಲಿಸಿ ಬಂದ ದೋಣಿಯೇ ಪತ್ತೆಯಾಗಲ್ಲಿಲ್ಲ. ದ್ವೀಪ ದೊಡ್ದದಾಗಿದ್ದುದ್ದರಿಂದ ಸದ್ಯಕ್ಕೆ ರಾತ್ರಿ ಉಳಿಯಲು ಆಸರೆ ಹುಡುಕಬೇಕಿತ್ತು. ಶರತ್, ಅರುಣ nadiya daDadalli ಸುಮ್ಮನೆ ಕಲ್ಲು ಹೊಡೆಯುತ್ತ ಕುಳಿತುಕೊಂಡರು. ನಾನು, ರಾಘು ನಾವು ಯಾವ ಕಡೆಯಿಂದ ಬಂದಿರಬಹುದು ಎಂದು ಯೋಚಿಸತೊಡಗಿದೆವು. ಕೊನೆಗೆ ನದಿಯ ತೀರದಲ್ಲೇ ದ್ವೀಪವನ್ನು ಸುತ್ತು ಹೊಡೆದರೆ ದೋಣಿ ಕಾಣಬಹುದು ಎಂದು ನಿರ್ಧಾರವಾಯಿತು. ಆದರೆ ಈಗಲೇ ಕತ್ತಲೆಯಾಗುತ್ತ ಬಂದಿರುವುದರಿಂದ adu ಅಸಾಧ್ಯವೆಂದು ರಾಘು ಹೇಳಿದ. ಆದ್ದರಿಂದ ನಾವು ಇರಲು ಯಾವುದಾದರು ಆಸರೆ ಸಿಗುತ್ತದೋ ಎಂದು ಹುಡುಕಿ ಹೊರಟೆವು. ಅಂತೂ ಸಂಜೆಯಾಗಿ ಕತ್ತಲು ಮುಸುಕುವ ಮೊದಲು ನಾವೊಂದು ಗುಹೆ ಹುಡುಕಿದೆವು.

ಮುಂದಿನ ಭಾಗದಲ್ಲಿ - ಗುಹೆಯಲ್ಲಿ ಒಂದು ರಾತ್ರಿ

Monday, November 2, 2009

ನಮ್ಮ ಸಾಹಸ ಯಾತ್ರೆ - ಭಾಗ -೧೧ - ನಿಗೂಡ ದ್ವೀಪ

ಬೆಳಗ್ಗೆ ಏಳು ಗಂಟೆಗೆ ಎಚ್ಚರವಾಯಿತು. ಶರತ್, ರಾಘು ಆಗಲೇ ಎದಿದ್ದರು. ಎದ್ದ ಮೇಲೆ ಮನೆಯ ವಿವರಗಳನ್ನೆಲ್ಲ ನೋಡಿದೆ. ಬಹಳ ಸುಂದರವಾದ ಹಳೆಯ ಕಾಲದ ಮನೆಯಾಗಿತ್ತು. ಮಲೆನಾಡಿನಲ್ಲಿ ಸಾಮಾನ್ಯವಾಗಿ ಕಂಡು ಬಂದಂತಹದೇ ಆಗಿತ್ತು. ಆ ಮನೆಯಲ್ಲಿ ನಾಲ್ಕು ಜನ ವಾಸವಾಗಿದ್ದರು. ಗಂಡ, ಹೆಂಡತಿ, ಮಗು ಹಾಗು ಒಂದು ಮುದುಕಿ ಇದ್ದರು. ಮುದುಕಿಗೆ ಬಹುಶಃ ಎಂಬತ್ತೈದರ ವಯಸ್ಸು. ಆಕೆ ನಮ್ಮ ಅಜ್ಜ ಅವರನ್ನ ವಿಚಾರಿಸಿದರು.

ಅಷ್ಟರಲ್ಲಿ ತಿಂಡಿ ತಯಾರಾಗಿತ್ತು. ದೋಸೆಯ ಜೊತೆ ನೆಂಜಿಕೊಳ್ಳಲು ಜೇನುತುಪ್ಪ ಬಹಳ ಸೊಗಸಾಗಿತ್ತು. ಅವರ ಮನೆಯಿಂದ ದೂರದಲ್ಲಿ ನದಿ ಕಾಣುತ್ತಿತ್ತು. ನಾವು ಬೆಳಗ್ಗೆ ಬಿಸಿಲು ಬಿದ್ದ ಮೇಲೆ ಸ್ನಾನಕ್ಕೆಂದು ನದಿಯ ಕಡೆಗೆ ಹೋದೆವು ಮಳೆಗಾಲದಲ್ಲಾದರೆ ಇನ್ನೂ ಹತ್ತು ಅಡಿ ಜಾಸ್ತಿ ದೂರ ನೀರು ಬರುತ್ತಿತ್ತು ಅಂತ ಅನ್ನಿಸುತ್ತೆ. ಸ್ವಲ್ಪ ದೂರ ಬಂಡೆಗಳಿದ್ದವು ನಂತರ ಸ್ವಲ್ಪ ಅಳವಿರುವ ಸ್ಥಳ ಇತ್ತು. ನೀರು ಮಳೆಗಾಲದ ಮಣ್ಣು ನೀರಾಗಿರದೆ ಸ್ವಚ್ಚವಾಗಿತ್ತು. ಆದರೆ ನೀರಿಗಿಳಿದ್ದಿದ್ದೆ ಥರ ಥರ ನಡುಗುವಷ್ಟು ಶೀತ ಇತ್ತು. ಅರುಣ, ನಾನು ಈಜು ಬಾರದವರು ಸುಮ್ಮನೆ ನೀರಲ್ಲಿ ಆಟ ಆಡುತ್ತಿದ್ದೆವು. ಶರತ್, ರಘು ಈಜು ಹೊಡೆಯುತ್ತಿದ್ದರು. ಸ್ವಲ್ಪ ಹೊತ್ತಾದ ಮೇಲೆ ಒದ್ದೆ ಟವೆಲ್ ಬಂದೆ ಮೇಲೆ ಒಣಗಿಸಿ ಹಾಗೆಯೇ ಬಿಸಿಲ್ಲಲ್ಲಿ ಬಿದ್ದುಕೊಂಡೆ. ರಾಘು ನನ್ನ ಮೇಲೆ ತಣ್ಣೀರು ಹಾಕಿ ಎಬ್ಬಿಸಿದ. ಆಟ ನಾವು ದೂರದಲ್ಲಿ ಕಾಣುವ ದ್ವೀಪಕ್ಕೆ ಹೋಗೋಣ ಎಂದು ಕೇಳುತ್ತಿದ್ದ. ನಾನು ಹೇಗೆಂದು ಕೇಳಿದಾಗ ತಾನು, ಶರತ್ ಒಂದು ದೋಣಿಯನ್ನು ಪತ್ತೆ ಮಾಡಿದ್ದೆವೆಂದೂ, ಅದರಲ್ಲಿ ನಾಲ್ವರೂ ಹೋಗಬಹುದೆಂದು ಹೇಳಿದ. ಆದರೆ ಈಜು ಬಾರದ ನನಗೆ ದೋಣಿ ಅಕಸ್ಮಾತ್ ಮಗಚಿದರೆ ಏನು ಗತಿ ಎಂದು ಭಯವಾಯಿತು.
ಕೊನೆಗೆ ಅರುಣ ಕೂಡ ಒಪ್ಪಿಕೊಂಡು ಕುಣಿಯುತ್ತಿದ್ದದ್ದರಿಂದ ನಾನು ಒಪ್ಪಿಕೊಳ್ಳಬೇಕಾಯಿತು. ಆದರೆ ನಾವು ಆ ಮನೆಯವರಿಗೆ ತಿಳಿಸದೇ ಬರುವ ಹಾಗಿರಲ್ಲಿಲ್ಲ. ಮುಂದಾಳತ್ವ ವಹಿಸಿದ ರಾಘು ತಾನು ಹೇಳಿ ಬರುತ್ತೇನೆಂದು ಹೊರಟ. ಇಲ್ಲದ್ದಿದ್ದರೆ ಅವರು ಊಟಕ್ಕೆ ನಮ್ಮನ್ನು ಕಾಯುತ್ತಿದ್ದರು. ಕೊನೆಗೆ ನಾವು ಹೊರತ್ತದ್ದಾಯಿತು. ನಾನು ರಾಘು ಹುಟ್ಟು ಹಾಕುತ್ತಿದ್ದೆವು. ಅರುಣ ನೀರಿಗೆ ಕೈ ಇಳಿಬಿಟ್ಟು ಆಟವಾಡುತ್ತಿದ್ದ. ಶರತ್, ಅರುಣ ಇಬ್ಬರೂ ಮದ್ಯೆ ಕೂತಿದ್ದರು. ಅಂತಾ ಸೆಳೆತವೇನೂ ಇರದ್ದಿದ್ದರೂ ನನಗೆ ನದಿಯ ಮದ್ಯೆ ಹೋಗುವಷ್ಟರಲ್ಲಿ ವಿಪರೀತ ಗಾಭರಿಯಾಯಿತು. ನನ್ನೊಬ್ಬನನ್ನು ಬಿಟ್ಟು ಉಳಿದ ಮೂವರು ನಿಶ್ಚಿಂತೆಯಿಂದ ಇದ್ದರು. ನಾನು ಆ ಮನೆಯವರು ಹೇಗೆ ಒಪ್ಪಿಗೆ ಕೊಟ್ಟರು ಎಂದು ಆಶರ್ಯ ದಲ್ಲಿದ್ದೆ. ಕೊನೆಗೆ ಆತನ್ನನ್ನು ಕೇಳಿದಾಗ ಆತ ನಾವು ದ್ವೀಪಕ್ಕೆ ಹೋಗುವ ಬಗ್ಗೆ ಅವರಿಗೆ ತಿಳಿಸಿರಲೇ ಇಲ್ಲ! ತಾವು ಕಾಡು ತಿರುಗಲು ಹೋಗುತ್ತೇವೆ ಆದ್ದರಿಂದ ಮಧ್ಯಾಹ್ನದ ಊಟಕ್ಕೆ ಬರಲ್ಲಗುವುದಿಲ್ಲ ಅಂತ ಅಷ್ಟೆ ಹೇಳಿದ್ದ. ನಾನು ಕೆಪ್ಪ ಹೇಳಿದ್ದ ದ್ವೀಪವೇ ಇದಾಗಿರಬಹುದು ಎಂದು ಆಲೋಚಿಸುತ್ತಾ ಅಲ್ಲಿರಬಹುದಾದ ಭೂತ, ನಿಗೂಡತೆಯ ಬಗ್ಗೆ ಚಿಂತಿಸುತ್ತಿದ್ದೆ. ಕೊನೆಗೆ ಅರ್ದ ಗಂಟೆ ಹುಟ್ಟು ಹಾಕಿದ ಮೇಲೆ ನಾವು ದ್ವೀಪವನ್ನು ತಲುಪಿದೆವು.
ದ್ವೀಪದ ಹೊರಗೆಲ್ಲಾ ಜಿಗ್ಗು, ಪೊದೆ ಬೆಳೆದುಕೊಂಡಿದ್ದರೂ ದ್ವೀಪದ ಮದ್ಯೆ ಹೋಗುತ್ತಿದ್ದಂತೆ ಪಾಲು ಬಿದ್ದ ಮನೆಗಳು ಕಂಡು ಬಂದವು. ಮದ್ಯೆ ಕೆರೆಯನ್ತಿರುವ ಯಾವುದೋ ಹೊಂಡ ಕಂಡು ಬಂತು. ಇವುಗಳನ್ನು ಬಿಟ್ಟರೆ ಇನ್ನ್ಯಾವುದೇ ವಿಶೇಷ ಕಂಡು ಬರಲ್ಲಿಲ್ಲ.

Saturday, October 31, 2009

ನಮ್ಮ ಸಾಹಸ ಯಾತ್ರೆ - ಭಾಗ -೧೦ - ಕೈ ಕೊಟ್ಟ ಸಂಕನಾವು ಅವನ ಗುಡಿಸಲಿಂದ ಹೊರಟಾಗ ಐದು ಕಾಲಾಗಿತ್ತು. ಬೇಗ ಅವರ ಮನೆ ತಲುಪಲು ಜೋರಾಗಿ ನಡೆಯುತ್ತಿದ್ದೆವು. ಅರುಣ ನಮ್ಮ ಜೊತೆ ನಡೆಯಲಾರದೆ ಓದಿ ಬರುತ್ತಿದ್ದ. ಕಾಡು ಮೊದಲಿನಷ್ಟು ದಟ್ಟವಲ್ಲದ್ದಿದ್ದರೂಕಾಲು ದಾರಿಯೇನು ಇರಲ್ಲಿಲ್ಲ. ನಾವು ಹೋಗಿದ್ದೆ ದಾರಿಯಾಗಿತ್ತು. ಬಹುಶಃ ಮಳೆಗಾಲದ ನಂತರ ಕಾಲು ದಾರಿ ಮುಚ್ಚಿ ಹೋಗಿರಬೇಕು. ಆತನ ಮನೆಯಿಂದ ಸ್ವಲ್ಪ ದೂರ ಕಾಲು ದಾರಿ ಇತ್ತಷ್ಟೇ. ನಾವೆಲ್ಲಿ ದಿಕ್ಕು ತಪ್ಪಿ ಕಾಡು ಪಾಲಾಗುತ್ತೆವೋ ಎಂದು ಹೆದರಿಕೆ ಯಾಯಿತು. ಅಷ್ಟರಲ್ಲಿ ಒಂದು ಹೊಳೆ ಹರಿಯುತ್ತಿರುವ ಶಬ್ದ ಕೇಳಿ ಬಂತು. ಸ್ವಲ್ಪ ಹೊತ್ತಿನ ನಂತರ ಒಂದು ಚಿಕ್ಕ ಹಳ್ಳ ನಮಗೆ ಎದುರಾಯಿತು. ನಾವು ಒಟ್ಟು ಹೇಗೋ ನಡೆದು ಬಂದಿದ್ದರೂ ಹೆಚ್ಚು ಕಡಿಮೆ ಸರಿ ದಾರಿಗೆ ಬಂದಿದ್ದೆವು. ಏಕೆಂದರೆ ಸ್ವಲ್ಪ ದೂರದಲ್ಲಿಯೇ ಹಳ್ಳ ದಾಟಲು ಹಾಕಿದ್ದ ಸಂಕ ಕಾಣಿಸಿತು. ನಾವು ಅದರ ಬಳಿ ಹೋಗಿ ನೋಡಿದರೆ ಎರಡು ಮರಗಳನ್ನು ಉದ್ದಕ್ಕೆ ಹಾಸಿದ್ದರು. ನಾನು ನಿದಾನ ಒಬ್ಬೊಬ್ಬರಾಗಿ ದಾಟಬೇಕೆಂದು ಹೇಳಿದೆ. ಮೊದಲು ತಾನು ದಾಟುತ್ತೆನೆಂದು ಶರತ್ ಬಂದ. ಆತ ನಿದಾನ ಕೂತುಕೊಂಡು ತೆವಳುತ್ತ ದಾಟಿದ. ನಾನು ಸಹ ಆತನಂತೆ ಕುಳಿತು ಸಂಕದ ಮೇಲೆ ಕಾಲಿಡುತ್ತಿದ್ದಂತೆ ಅದು ಶಬ್ದ ಮಾಡುತ್ತಾ ಮುರಿದು ಬಿತ್ತು. ಶರತ್ ನ ಅದೃಷ್ಟ ಚೆನ್ನಾಗಿತ್ತು ಅನ್ನಿಸುತ್ತೆ. ನೀರು ಹತ್ತು, ಹನ್ನೆರಡು ಅಡಿ ಆಳದಲ್ಲಿ ಹರಿಯುತ್ತಿತ್ತು. ಇವನೆನಾದರು ಬಿದ್ದಿದ್ದರೆ ಬೆನ್ನು, ಕೈ ಕಾಲು ಮುರಿದುಕೊಳುತ್ತಿದ್ದಿದ್ದು ಖಚಿತವಾಗಿತ್ತು. ಸಮಯ ಬೇರೆ ಜಾರುತ್ತಿತ್ತು. ಹಕ್ಕಿಗಳೆಲ್ಲ ಗೂಡಿಗೆ ಹಿಂದಿರುಗುತ್ತಿದ್ದವು. ಈಗ ಹಳ್ಳ ಇಳಿದು ಹತ್ತುವುದೊಂದೇ ಅದನ್ನು ದಾಟಲು ಉಳಿದ ಮಾರ್ಗವಾಗಿತ್ತು. ನಾನು ಮೊದಲು ಅರುಣನನ್ನು ಇಳಿಸಿದೆ. ನಂತರ ರಾಘು ನನ್ನ ಕೈ ಹಿಡಿದುಕೊಂಡ. ನಾನು ನಿದಾನ ಇಳಿದೆ. ಅನಂತರದ ಸರದಿ ರಾಘುವಿನದ್ದಗಿತ್ತು. ಆತ ಯಾವುದೋ ಮರದ ಬೇರು ಹಿಡಿದು ಇಳಿಯಲು ಪ್ರಯತ್ನಿಸಿದ. ನಾನು ಆತನನ್ನು ಕೆಳಗಿನಿಂದ ಹಿಡಿದುಕೊಂಡೇ. ಆರದೆ ಒಮ್ಮೆಲೇ ಆತ ಕೈ ಜಾರಿ ಬಿದ್ದು ಬಿಟ್ಟ. ಅರ್ದ ಇಳಿದ್ದಿದ್ದರಿಂದ ಏನು ಪೆಟ್ಟಾಗದೆ ಬಚಾವಾದ. ಆತನ ಮೈ ಎಲ್ಲ ಒದ್ದೆಯಾಗಿತ್ತು. ಆ ದಾದಾ ಹತ್ತುವಷ್ಟರಲ್ಲಿ ಎಲ್ಲರೂ ಉಸ್ಸಪ್ಪ ಎಂದು ಕುಳಿತುಬಿಟ್ಟೆವು. ಹೀಗೆ ಕಾಲು ಗಂಟೆ ನಷ್ಟವಾಯಿತು. ಈಗ ಸೂರ್ಯ ಮೂರ್ತಿ ಮುಳುಗಿದ್ದ. ಕತ್ತಲೆ ನಿದಾನ ಆವರಿಸುತ್ತಿತ್ತು. ನಾವು ಕೈ ಕೊಟ್ಟ ಸಂಕವನ್ನೇ ಬೈಯುತ್ತ ಹೊರಟೆವು. ನಿಧಾನವಾಗಿ ಮರ ಗಿಡಗಳು ಮಸುಕಾಗತೊದಗಿದವು. ರಾತ್ರಿಯಲ್ಲಿ ಕೂಗುವ ಜೀರುಂಡೆಗಳು ತಮ್ಮ ಕೂಗನ್ನು ಪ್ರಾರಂಭಿಸಿದ್ದವು. ಅಷ್ಟರಲ್ಲಿ ರಾಘು ಸಣ್ಣದೊಂದು ಟಾರ್ಚ್ ತೆಗೆದ. ಅವನು ಸ್ಕೌಟ್ ನಲ್ಲಿದ್ದರಿಂದ ಕಾಡಿನಲ್ಲೆಲ್ಲ ಕ್ಯಾಂಪ್ ಮಾಡಿ ಅನುಭವ ಇತ್ತು. ಆದ್ದರಿಂದ ಸಾಮಾನ್ಯವಾಗಿ ಬೇಕಾಗುವ ಸಾಮಗ್ರಿಗಳನ್ನೆಲ್ಲಾ ತಂದಿದ್ದ. ಆ ಸಣ್ಣ ಟಾರ್ಚ್ ನಾಲ್ಕು ಜನಕ್ಕೆ ಯಾವ ರೀತಿಯಿಂದಲೂ ಸಾಲುತ್ತಿರಲ್ಲಿಲ್ಲ. ಆದರೂ ಹೇಗೋ ಹೆಜ್ಜೆ ಹಾಕಿದೆವು. ಒಮ್ಮೆಯಂತೂ ಒಂದು ಕಾಡು ಬೆಕ್ಕು ಅಡ್ಡ ಬಂದು ನಮ್ಮೆಲ್ಲರ ಭಯಕ್ಕೆ ಕಾರಣವಾಯಿತು. ಅದರ ಹೊಳೆಯುವ ಕಣ್ಣು ಕಂಡು ನಮಗೆ ಭಯವಾಗಿತ್ತು.


ಅಂತೂ ಇಂತೂ ಯಾವುದೋ ಜಾನುವಾರುಗಳು ಮಾಡಿಟ್ಟ ದಾರಿ ಎದುರಾಯಿತು. ಕಾಡು ಮುಗಿದು ತಣ್ಣನೆಯಾ ಗಾಳಿ ಮುಖಕ್ಕೆ ರಾಚಿತು. ನಾವೆಲ್ಲರೂ ನದಿ ಹತ್ತಿರ ಬಂತೆಂದು ಅಂದಾಜು ಮಾಡಿದೆವು. ಆದರೆ ನಾವು ನಡೆಯುತ್ತಿರುವ ದಾರಿಯು ಕೆಸರುಮಯವಾಗಿದ್ದು ನಮ್ಮ ಮೈ ಕೈ ಎಲ್ಲ ಕೆಸರಾಯಿತು. ನಂತರ ಒಂದು ಕಾಲುವೆಯನ್ನು ದಾಟಿದೆವು. ಕಾಲುವೆಯ ಪಕ್ಕದಲ್ಲೇ ಗದ್ದೆ ಇತ್ತು. ಗದ್ದೆಯ ಮೂಲಕ ಸಾಗುತ್ತಿದ್ದಾಗ ದೂರದಲ್ಲಿ ಮಿಣುಕು ದೀಪ ಕಂಡು ನಮಗೆ ಧೈರ್ಯ ತಂದು ಕೊಟ್ಟಿತು. ಇಷ್ಟು ಹೊತ್ತು ಯಾವುದೋ ಕ್ಷೋಭೆಗೆ ಒಳಗಾಗಿದ್ದ ಮನಸ್ಸು ಹಗುರವಾಯಿತು. ಕೊನೆಗೂ ಆ ಮನೆ ತಲುಪಿದೆವು. ಅದು ನಾವೆಣಿಸಿದಂತೆ ಅಜ್ಜ ಹೇಳಿದ ಮನೆ ಆಗಿತ್ತು. ಅವರು ನಮ್ಮ ಇತ್ಯೋಪಾಹಾರಿಗಳನ್ನು ವಿಚಾರಿಸಿ ಅಥಿತ್ಯಕ್ಕೆ ಮುಂದಾದರು. ಅವರ ಮನೆಗೆ ಎಲ್ಲೋ ಒಮ್ಮೊಮ್ಮೆ ಮಾತ್ರ ನೆಂಟರು ಬರುತ್ತಿದ್ದರು ಅನ್ನಿಸುತ್ತೆ. ರಾತ್ರೆ ಒಂಬತ್ತರವರೆಗೂ ಕೊರೆದರು. ಅರುಣ ಮಾತ್ರ ಯಾವ ಮುಲಾಜಿಲ್ಲದೆ ಪಕ್ಕದ ಗೋಡೆಗೆ ಒರಗಿ ನಿದ್ದೆ ಹೊಡೆದ. ನಂತರ ಆತನ್ನನ್ನು ಊಟಕ್ಕೆ ಎಬ್ಬಿಸಲಾಯಿತು. ನಮಗೆ ಹಸಿವಾಗಿದ್ದಕ್ಕೋ ಏನೋ ಊಟ ತುಂಬ ರುಚಿಸಿತು. ಅವರ ಹತ್ತು ವರ್ಷದ ಮಗ ನಮ್ಮ ಜೊತೆ ಬೇಗ ಸ್ನೇಹ ಬೆಳೆಸಿದ. ಆ ರಾತ್ರಿ ಆತ ನಮ್ಮ ಜೊತೆ ಮಲಗಿದ. ದೇಹ ತುಂಬ ದನಿದ್ದಿದ್ದರಿಂದ ಬೇಗ ನಿದ್ದೆ ಹತ್ತಿತು. ಅರುಣ ಮದ್ಯ ರಾತ್ರೆ ಒದೆಯುತ್ತಿದ್ದ. ಆಗ ಮಾತ್ರ ಒಂದೆರಡು ಭಾರಿ ಎಚ್ಚರವಾಗಿತ್ತು.ಮುಂದಿನ ಭಾಗದಲ್ಲಿ : ನಿಗೂಡ ದ್ವೀಪ.

Friday, October 30, 2009

ನಮ್ಮ ಸಾಹಸ ಯಾತ್ರೆ - ಭಾಗ -೯ - ನದಿಯ ಕಡೆಗೆ

ಎಲ್ಲರೂ ಹೊಸ ಹುರುಪಿನಿಂದ ಘಟ್ಟ ಇಳಿಯತೊಡಗಿದೆವು. ಘಟ್ಟ ಬಹಳ ಕಡಿದಾಗಿತ್ತು. ನಾನು ಶೂ ಹಾಕಿಕೊಂಡು ಬಂದಿದ್ದರಿಂದ ತೊಂದರೆ ಇರಲ್ಲಿಲ್ಲ. ಉಳಿದ ಮೂವರು ಚಪ್ಪಲಿಗಳನ್ನು ಕೈ ಯಲ್ಲಿ ಹಿಡಿದುಕೊಂಡು ದೇಹದ ಬಲವನ್ನು ನಿಯಂತ್ರಿಸುತ್ತಾ ಇಳಿಯುತ್ತಿದ್ದರು. ಸಾಮಾನುಗಳನ್ನೆಲ್ಲ ಹೆಗಲಿಗೆ ನೇತು ಹಾಕಿಕೊಂಡಿದ್ದೆವು. ಘಟ್ಟ ಇಳಿಯುತ್ತಾ ಹೋಗುತ್ತಿದ್ದಂತೆ ಕಾಡು ಮತ್ತೆ ದಟ್ಟವಾಗತೊಡಗಿತು. ಕಡಿದಾದ ಭಾಗವೆಲ್ಲಾ ಮುಗಿದೊಡನೆ ವಿಶ್ರಾಂತಿ ತೆಗೆದುಕೊಂಡೆವು. ಈಗ ಅನೇಕ ಜಾತಿಯ ಪ್ರಾಣಿ, ಪಕ್ಷಿಗಳು ಕಣ್ಣಿಗೆ ಬೀಳತೊಡಗಿದವು. ಕಾಡೊಳಗೆ ತುಂಬ ತಂಪಿತ್ತು. ನಾವೆಲ್ಲಾ ಹೀಗೆ ಕುಳಿತಿರುವಾಗ ಒಂದು ಮುಂಗಸಿ ದೂರದಲ್ಲಿ ಬರುವುದು ಕಾಣಿಸಿತು. ನಾವೆಲ್ಲರೂ ಸುಮ್ಮನೆ ಕುಳಿತು ಗಮನಿಸತೊಡಗಿದೆವು. ಅದಕ್ಕೆ ನಾವಿರುವುದು ತಿಳಿಯಿತು ಅಂತ ಅನ್ನಿಸುತ್ತೆ , ಮಿಂಚಿನಂತೆ ಯಾವುದೊ ಪೊದೆಯೊಳಗೆ ನುಗ್ಗಿತು. ನಂತರ ನಾವು ಮತ್ತೆ ಹೊರಟೆವು. ಈ ಭಾರಿ ನಾವು ಒಂದು ಕಪಿ ಸಮೂಹವನ್ನು ಎದುರುಗೊಂದೆವು. ಇದು ಕಪ್ಪು ಮೂತಿ ಮುಸಿಯವಾಗಿತ್ತು. ಅವೆಲ್ಲ ನಮ್ಮನ್ನು ಕಂಡು ಮರ ಏರಿ ಕುಳಿತವು. ಸಂಜೆಯಾಗುತ್ತಿದ್ದಂತೆ ದೂರದಲ್ಲೆಲ್ಲೋ ನವಿಲುಗಳ ಕೂಗಾಟ ಕೇಳಿತು. ಮಲೆನಾಡಿನಲ್ಲಿ ನವಿಳುಗಲೇನು ಅಪರೂಪವಲ್ಲ.

ನಾವು ಮುಂದುವರೆಯುತ್ತಿದ್ದಂತೆ ನಾವು ಹೋದದ್ದೇ ದಾರಿಯಾಯಿತು. ಒಮ್ಮೊಮ್ಮೆ ಕಾಡು ಎಷ್ಟು ಅಭೆದ್ಯವಾಗಿತ್ತೆಂದರೆ ನಾವು ಯಾವುದ್ಯಾವುದೋ ಕಾಡು ಪ್ರಾಣಿಗಳು ಮಾಡಿದ್ದ ದಾರಿಯಲ್ಲಿ ನುಸಿದು ಹೋಗುವ ಪರಿಸ್ಥಿತಿ ಬಂತು. ಸ್ವಲ್ಪ ದೂರ ಹೋಗುತ್ತಿದ್ದಂತೆ ದೂರದಲ್ಲೆಲ್ಲೋ ನಾಯಿಗಳ ಬೊಗಳುವಿಕೆ ಕೇಳಿಸಿತು. ಇದರಿಂದ ಹತ್ತಿರದಲ್ಲೆಲ್ಲೋ ಜನ ವಸತಿಯಿದೆ ಎಂದು ಅರ್ಥವಾಯಿತು. ಅಂತೂ ದಟ್ಟವಾದ ಕಾಡು ಮುಗಿದು ಬಯಲು ಎದುರಾಯಿತು. ಬಯಲಿನ ಆಚೆ ತುದಿಯಲ್ಲಿ ಒಂದು ಗುಡಿಸಲು ಇತ್ತು. ನಾವು ಅದನ್ನು ಸಮೀಪಿಸುತ್ತಿದ್ದಂತೆ ಒಂದು ಕಂತ್ರಿ ನಾಯಿ ವಿಪರೀತ ಗಲಾಟೆ ಎಬ್ಬಿಸಿತು. ಅದನ್ನು ಕೇಳಿ ಆ ಗುಡಿಸಲಿನ ಯಜಮಾನ ಹೊರಕ್ಕೆ ಬಂದ. ಆತ ಕಟ್ಟು ಮಸ್ತಗಿದ್ದು ಶ್ರಮಜೀವಿಯ ಹಾಗೆ ಕಂಡು ಬಂದ. ಆತನ ಸೊಂಟದಲ್ಲಿದ್ದ ಲಂಗೋಟಿ ಬಿಟ್ಟರೆ ಮೈ ಮೇಲೆ ಇನ್ನ್ಯಾವುದೇ ವಸ್ತ್ರವಿರಲ್ಲಿಲ್ಲ. ನಮ್ಮನ್ನು ನೋಡಿ ಯಾರು? ಎಂದು ಕೇಳಿದ. ಆ ನಾಯಿಯ ಗಲಾಟೆಯಲ್ಲಿ ನಮಗೆ ಆತ ಹೇಳಿದ್ದು ಕೇಳಿಸಲ್ಲಿಲ್ಲ. ಕೊನೆಗೆ ನಾಯಿಯನ್ನು ಓಡಿಸಿ ಮತ್ತೆ ಪ್ರಶ್ನಿಸಿದ. ನಾವು ನದಿ ನೋಡ ಬಂದವರೆಂದು. ನಮಗೆ ಸ್ವಲ್ಪ ನೀರಿದ್ದರೆ ಕೊಡಬೇಕೆಂದು ಕೇಳಿದೆವು. ಆತ ನೀರು ತಂದು ಕೊಡುತ್ತಾ ರಾತ್ರಿ ಎಲ್ಲಿ ಉಳಿಯುತ್ತೀರಿ ಎಂದು ಕೇಳಿದ. ನಾವು ಅಜ್ಜ ತಿಳಿಸಿದ ಮನೆಯವರ ಬಗ್ಗೆ ಹೇಳಿದೆವು. ಆತ ನಾವು ದಿಕ್ಕು ತಪ್ಪಿ ಬಂದಿದ್ದೇವೆಂದು ಅವರ ಮನೆಗೆ ಹೋಗಲು ನಾವಿಳಿದ ಘಟ್ಟದ ಪಕ್ಕದ ಘಟ್ಟದಿಂದ ಇಳಿಯಬೇಕ್ಕಿತ್ತೆಂದು ತಿಳಿಸಿದ. ಅಲ್ಲಿಗೆ ಈಗ ಹೋಗಬಹುದೇ ಎಂದು ವಿಚಾರಿಸಿದಾಗ ಹೋಗಬಹುದೆಂದು, ಆದರೆ ಮದ್ಯೆ ಕಾಡು ದಾಟಬೇಕಾಗುತ್ತದೆ, ಕನಿಷ್ಠ ಒಂದು ಗಂಟೆ ಬೇಕಾಗುತ್ತದೆ ಎಂದು ಹೇಳಿದ. ನಮ್ಮ ಬಳಿ ಹೆಚ್ಚು ಸಮಯವಿರಲ್ಲಿಲ್ಲ. ಕತ್ತಲಾಗುವುದಕ್ಕಿಂತ ಮೊದಲು ಅಲ್ಲಿಗೆ ಹೋಗಿ ತಲಪಬೇಕೆಂದು ಎದ್ದೆ. ಆತನ ಮನೆಯ ಸುತ್ತ ಹಾವು, ಮುಂಗಸಿ ಇತ್ಯಾದಿ ಪ್ರಾಣಿಗಳ ಚರ್ಮ ನೇತು ಹಾಕಿದ್ದ. ಅಲ್ಲೇ ಹತ್ತಿರದಲ್ಲಿ ಮೊಲ ಹಿಡಿಯುವ ಬೋನಿತ್ತು. ರಾಘು ಅದನ್ನು ಕಂಡು ಸಿಟ್ಟಿಗೆದ್ದು ಆತನಿಗೆ ಪ್ರಾಣಿ, ಪಕ್ಷಿಗಳ ಬಗ್ಗೆ ಉಪದೇಶ ಪ್ರಾರಂಬಿಸಿದ. ನಾನು ಕೊನೆಗೆ ಕಟ್ಟಲಾಗುತ್ತದೆ ಎಂದು ಆತನನ್ನು ಎಬ್ಬಿಸಿಕೊಂಡು ಹೊರಡಬೇಕಾಯಿತು. ಆ ಮನುಷ್ಯ ನಾವೀಗ ಹೋಗಕೂಡದೆಂದು ಕತ್ತಲಲ್ಲಿ ಹಾವು, ಹರಣೆ ಇರುತ್ತದೆ ಎಂದ. ನಮಗೆ ಹೊರಡದೆ ಗತ್ಯಂತರವಿರಲ್ಲಿಲ್ಲ. ಆತನ ಮನೆಯಲ್ಲಿ ಉಳಿಯುವುದು ಸಾದ್ಯವೇ ಇರಲ್ಲಿಲ್ಲ. ಸತ್ತ ಪ್ರಾಣಿಗಳ ನಾತ ಮನೆ ತುಂಬ ಹರಡಿತ್ತು. ಅದ್ದರಿಂದ ದೃಡ ಮನಸ್ಸು ಮಾಡಿ ಹೊರಟೆ ಬಿಟ್ಟೆವು. ಕೊನೆಗೆ ನಮ್ಮ ಈ ನಿರ್ಧಾರ ಎಷ್ಟು ಅಪಾಯಕಾರಿಯಾಗಿತ್ತು ಎಂಬುದನ್ನೂ ಮನಗೊಂಡೆವು .

ಮುಂದಿನ ಭಾಗದಲ್ಲಿ - ಕೈ ಕೊಟ್ಟ ಸಂಕ.

Wednesday, October 28, 2009

ನಮ್ಮ ಸಾಹಸ ಯಾತ್ರೆ - ಭಾಗ -೮ - ಘಟ್ಟದ ಮೇಲೆ

ಹೀಗೆ ಘಟ್ಟದ ತುದಿ ತಲುಪುವಷ್ಟರಲ್ಲಿ ಮಧ್ಯಾಹ್ನ ಒಂದೂ ಹತ್ತಾಗಿತ್ತು. ಎದುರಿಗೆ ರುದ್ರ ರಮಣೀಯ ದೃಶ್ಯ ಕಣ್ಣಿಗೆ ಬೀಳುತ್ತಿತ್ತು. ನಾವು ಮರದ ತಂಪಲು ಹುಡುಕಿ ಅಲ್ಲಿ ಕುಳಿತುಕೊಂಡೆವು. ನದಿಯು ಮಹಾಸಾಗರದಂತೆ ಹರಡಿಕೊಂಡಿತ್ತು. ಮದ್ಯೆ ಒಂದೆರಡು ದ್ವೀಪ ಕಾಣುತ್ತಿದ್ದವು. ಘಟ್ಟದ ಮೇಲೆ ಕುಳಿತು ಚಪಾತಿ ಖಾಲಿ ಮಾಡತೊಡಗಿದೆವು. ಬರುತ್ತಾ ಇಷ್ಟು ಚಪಾತಿ ಏಕೆ ನಾವೇನು ಕಾಶಿ, ರಾಮೇಶ್ವರಕ್ಕೆ ಹೊರಟಿದ್ದೆವೇನುಎಂದು ಅಜ್ಜಿಯನ್ನು ಬಯುತ್ತಾ ಚಪಾತಿ ತಂದಿದ್ದೆವು. ಈಗ ನೋಡಿದರೆ ತಂದಿದ್ದು ಸಾಲುವುದಿಲ್ಲವೇನೋ ಅನ್ನಿಸುವಷ್ಟು ಹಸಿವಾಗಿತ್ತು. ಚಪಾತಿ ಜೊತೆ ನೆಂಜಿಕೊಳ್ಳಲು ಹಾಕಿದ್ದ ತುಪ್ಪ, ಸಕ್ಕರೆ, ಚಟ್ನಿ ಇತ್ಯಾದಿಗಳು ಬಹಳ ರುಚಿಯಾಗಿ ಕಂಡು ಬಂತು. ರಾಘುಶರತ್ ನೀರನ್ನು ಅರಸಿ ಘಟ್ಟ ಇಳಿಯತೊಡಗಿದರು. ನಾವು ತಂದಿದ್ದ ನೀರೆಲ್ಲಾ ಖಾಲಿಯಾಗಿ ಅಬ್ಬಿ ನೀರನ್ನು ಅರಸಿ ಅವರು ಹೋಗಿದ್ದರು. ಅರುಣ ಒಂದು ಮರದ ಬುಡದಲ್ಲಿ ಬಿದ್ದುಕೊಂಡಿದ್ದ. ನಾನು ಒಂದು ಬಂಡೆಗೆ ಒರಗಿಕೊಂಡು ನದಿಯ ಸುನ್ದರ್ಯ ವನ್ನು ಅಸ್ವಾದಿಸುತ್ತಿದ್ದೆಆ ಬಿರು ಬಿಸಿಲಲ್ಲಿ ಯಾವ ಪ್ರಾಣಿ, ಪಕ್ಷಿಗಳೂ ಕಂಡು ಬರಲ್ಲಿಲ್ಲ. ಎರಡು ಮೂರು ಹದ್ದುಗಳು ಆಹಾರಕ್ಕಾಗಿ ಆಕಾಶದಲ್ಲಿ ಸುತ್ತು ಹೊಡೆಯುತ್ತಿದ್ದವು. ನಾನು ಹಾಗೆ ನಿದ್ದೆ ಹೋದೆ. ಶರತ್, ರಾಘು ಬಂದು ಎಬ್ಬಿಸಿದರು. ಆಗ ಗಂಟೆ ಎರಡೂವರೆಯಾಗಿತ್ತು ಒಂದೆರಡು ಸೌತೆಕಾಯಿ ಹೆಚ್ಚಿದ್ದರು. ಅದಕ್ಕೆ ಉಪ್ಪು, ಮೆಣಸಿನ ಕಾಯಿ, ನಿಂಬೆ ರಸ ಬೆರೆಸಿ ನೆಂಜಿಕೊಳ್ಳಲು ಉಪ್ಪು ಕಾರ ತಯಾರಿಸಿದ್ದರು. ನಾನು, ಅರುಣ ಎದ್ದು ಸೌತೆ ಕಾಯಿtಇನ್ದೆವು . ಸ್ವಲ್ಪ ಹೊತ್ತು ವಿಶ್ರಾಂತಿಯ ನಂತರ ಪ್ರಯಾಣ ಮುಂದುವರೆಸಿದೆವು.

ಮುಂದಿನ ಭಾಗದಲ್ಲಿ - ನದಿಯ ಕಡೆಗೆ.

Tuesday, October 27, 2009

ನಮ್ಮ ಸಾಹಸ ಯಾತ್ರೆ - ಭಾಗ - ೭ - ಘಟ್ಟದ ಹಾದಿ

ಎಲ್ಲಾರೂ ಹೊಳೆಯ ದಡದಲ್ಲೇ ನಡಿಯತೊಡಗಿದೆವು

ನಾವು ಬೇಗ ಬೇಗ ಎದ್ದು ತಯಾರಾದೆವು. ತಿಂಡಿ, ತೀರ್ಥ ಮಾಡಿ ಮುಗಿಸುವಷ್ಟರಲ್ಲಿ ಅರುಣ ಹಾಜರಾಗಿದ್ದ. ಯಾವತ್ತೂ ಬೆಳಗ್ಗೆ ಎಂಟರ ಒಳಗೆ ಎದ್ದು ಗೊತ್ತಿಲ್ಲದ ಆತ ಬೆಳಗ್ಗೆ ಆರೂವರೆಗೆ ಎದ್ದು ಬಂದಿದ್ದು ಸೋಜಿಗವೆನಿಸಿತು. ನಾವು ತಿಂಡಿ, ಕುಡಿಯುವ ನೀರು, ಒಂದೆರಡು ಜೊತೆ ಬಟ್ಟೆ, ಟವೆಲ್ ಇತ್ಯಾದಿ ತೆಗೆದುಕೊಂಡು ಹೊರಡಲು ಅಣಿಯಾದೆವು. ಅರುಣ ಕೂತಲ್ಲೇ ತೂಕಡಿಸುತ್ತಿದ್ದ. ಅವನನ್ನು ಎಬ್ಬಿಸಿಕೊಂಡು ಹೊರಟೆವು. ಹೊರಡುವಾಗ ಅಜ್ಜ, ಅಜ್ಜಿ 'ಜಾಗ್ರತೆ', 'ನದಿಯಲ್ಲಿ ಈಜಲು ಹೋಗಬೇಡಿ' ಇತ್ಯಾದಿ ಎಚ್ಚರಿಕೆಯ ಮಾತನ್ನು ಹೇಳಿದರು. ಅರುಣನ ಮನೆಯಲ್ಲಂತೂ ಹಿಂದಿನ ದಿನ ಮುಂಜಾಗ್ರತೆ ಬಗ್ಗೆ ಅರ್ಧ ಗಂಟೆ ಕೊರೆದಿದ್ದರು. ನಾವು ಘಟ್ಟದ ಇನ್ನೊಂದು ಮಗ್ಗುಲಿಗೆ ಹೋಗಿ ಅಲ್ಲಿರುವವರ ಮನೆಯಲ್ಲಿ ಉಳಿದುಕೊಳ್ಳಬೇಕು ಎಂದು ನಿರ್ಧಾರ ಮಾಡಿದ್ದೆವು. ಇದನ್ನೇ ಮನೆಯಲ್ಲಿ ಹೇಳಿದ್ದೆವು. ಆದರೆ ಅಲ್ಲಿಗೆ ಹೋದ ಮೇಲೆ ನಮ್ಮ ಹಂಚಿಕೆ ಬದಲಾಯಿತು.ಅದು ಅಕ್ಟೋಬರ್ ಸಮಯವಾದ್ದರಿಂದ ನಮ್ಮ ಮನೆಯ ಹಿಂದಿನ ಜಲಪಾತದಲ್ಲಿ ತೆಳ್ಳಗೆ ನೀರು ಬೀಳುತ್ತಿತ್ತು. ಆ ಹಳ್ಳದಲ್ಲಿ ಹೋದರೆ ಅದು ಘಟ್ಟದಿಂದ ಬಂದಿರುವುದರಿಂದ ಘಟ್ಟಕ್ಕೆ ಹೋಗುವುದು ಸುಲುಭವಾಗುತ್ತದೆ ಎಂದು ನಮ್ಮ ಹಂಚಿಕೆ. ಅದರ ಪ್ರಕಾರ ಆ ಹಳ್ಳದ ದಡದಲ್ಲೇ ನಡೆಯುತ್ತಾ ಸಾಗಿದೆವು. ಹೀಗೆ ನಮ್ಮ ಘಟ್ಟದ ಯಾತ್ರೆ ಆರಂಭವಾಯಿತು.ಒಂದು ಗಂಟೆ ಹೊಳೆಯಲ್ಲಿ ನಡೆಯುವಷ್ಟರಲ್ಲಿ ನಮ್ಮೆಲ್ಲರಿಗೂ ಸುಸ್ತಾಯಿತು. ಅಲ್ಲೇ ಪಕ್ಕದಲ್ಲಿ ಒಂದು ಬಂಡೆಯ ಮೇಲೆ ಕುಳಿತೆವು. ಮದ್ಯೆ ಬರುವಾಗ ಒಂದು ಕೆರೆ ಹಾವನ್ನು ನೋಡಿದ್ದೆವು. ನಾನು ರಾಘುವಿನ ಬಳಿ ಕೆರೆ ಹಾವು ಹೆಣ್ಣು, ನಾಗರ ಹಾವು ಗಂಡು ಎನ್ನುತ್ತಾರೆ ನಿಜವೇ ಎಂದು ಅನುಮಾನ ವ್ಯಕ್ತಪಡಿಸಿದೆ. ರಾಘುವೂ ತನಗೆ ಸಹಿತ ಸರಿಯಾಗಿ ಗೊತ್ತಿಲ್ಲ ಎಂದ. ಅರುಣ "ಸುಧಿಯಣ್ಣ ಘಟ್ಟದ ಮೇಲೆ ಕಾಡುಕೋಣ ಇರುವುದು ನಿಜವೇ?" ಎಂದು ನನ್ನನು ಪ್ರಶ್ನಿಸಿದ. ನಾನು "ಘಟ್ಟದ ಕೆಳಗಿನ ಬಯಲ್ಲಲ್ಲಿ ಇರಬಹುದು" ಎಂದೆ. ಶರತ್ "ಮುಳುಗಡೆ ಕಾಡು ಎಂದರೇನು" ಅಂತ ಕೇಳಿದ. ಅದಕ್ಕೆ ರಾಘು "ಅಣೆಕಟ್ಟು ಕಟ್ಟಿದ ಮೇಲೆ ಮುಳುಗಡೆಯಾಗಿ ಉಳಿದ ಕಾಡೇ ಮುಳುಗಡೆ ಕಾಡು" ಎಂದ. ಹೀಗೆ ನಮ್ಮ ಸಂಭಾಷಣೆ ಎಲ್ಲಿಂದ ಎಲ್ಲಿಗೋ ಸಾಗುತ್ತಿತ್ತು. ನಾನು ಸಮಯ ನೋಡಿ ಲೇಟಾಗುತ್ತದೆ, ಕೊನೆಗೆ ಸೂರ್ಯ ನೆತ್ತಿಯ ಮೇಲೆ ಬಂದರೆ ನಡೆಯುವುದು ಕಷ್ಟ ಎಂದೆಚ್ಚರಿಸಿದೆ. ನಂತರ ಎಲ್ಲರೂ ಹೊರಟೆವು. ಹೋಗುತ್ತಾ ಹೋಗುತ್ತಾ ಹಳ್ಳದ ಸುತ್ತಲ ಕಾಡು ದತ್ತವಾಗುತ್ತಿರುವುದನ್ನು ಗಮನಿಸಿದೆ. ಕೊನೆಗೆ ಹಳ್ಳದ ಪಕ್ಕ ಒಂದು ಕಾಲು ದಾರಿ ಕಂಡು ಹಳ್ಳಕ್ಕೆ ವಿದಾಯ ಹೇಳಿ ಅದರ ಮೂಲಕ ಹೋಗತೊದಗಿದೆವು. ಕಾಡು ಅಭೆದ್ಯವಾಗಿ ಬೆಳೆದು ಕೆಲವು ಕಡೆಯಂತೂ ಕತ್ತಿಯಿಂದ ಸವರಿಕೊಂಡು ಮುಂದುವರೆಯಬೇಕಾಗಿತ್ತು. ಕೊನೆಗೆ ಒಂದು ಚಿಕ್ಕ ಗುಡ್ಡ ಹತ್ತಿದೆವು. ಅಷ್ಟರಲ್ಲಿ ಕಾಡು ಮುಗಿಯುತ್ತ ಬಂದು ಗುಡ್ಡದ ತುದಿಗೆ ಬಂದೆವು. ಘಟ್ಟ ಈಗ ಹತ್ತಿರದಿಂದ ಕಾಣುತ್ತಿತ್ತು. ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಂಡು ಘಟ್ಟಗಳ ದಿಕ್ಕಿನತ್ತ ಪ್ರಯಾಣ ಮುಂದುವರೆಸಿದೆವು. ಮದ್ಯೆ ನೇರಳೆ, ನೆಲ್ಲಿ, ಹೊಳೆ ದಾಸವಾಳ, ಮುಳ್ಳು ಹಣ್ಣಿನ ಗಿಡಗಳು ಏನಾದರೂ ಕಣ್ಣಿಗೆ ಬಿದ್ದರೆ ವೇಗ ಕಡಿತಗೋಳ್ಳುತ್ತಿತ್ತು.ಮುಂದಿನ ಭಾಗದಲ್ಲಿ : ಘಟ್ಟದ ಮೇಲೆ ನಾವು.

Monday, October 26, 2009

ನಮ್ಮ ಸಾಹಸ ಯಾತ್ರೆ - ಭಾಗ - ೬ - ನಮ್ಮ ನಿರ್ಧಾರ

ಅಷ್ಟರಲ್ಲಿ ಶರತ್, ಅರುಣ ಒಂದು ಪ್ಲಾಸ್ಟಿಕ್ ಕವರ್ ತುಂಬ ನೇರಳೆ ಹಣ್ಣು ತುಂಬಿಕೊಂಡು ಬಂದಿದ್ದರು. ಅವರೂ ಹಣ್ಣು ತಿನ್ನುತ್ತಾ ಅವನ ಕತೆಗಳನ್ನು ಮೆಲುಕು ಹಾಕತೊಡಗಿದರು. ಘಟ್ಟದಲ್ಲಿ ಈಗಲೂ ಹುಲಿ, ಕಾಡುಕೋಣಗಳು ಇವೆಯಂತೆ. ಆ ನದಿಯ ದಡದಲ್ಲೆಲ್ಲೋ ಒಂದೆರಡು ಕುಟುಂಬಗಳು ವಾಸವಾಗಿವೆಯಂತೆ. ಆ ನದಿಯ ಮದ್ಯೆ ಒಂದು ದ್ವೀಪ ಇದ್ದು ಅಲ್ಲಿ ವಾಸಿಸುತ್ತಿದ್ದ ಮುರಿದ ಮನೆ ಇತ್ಯಾದಿ ಇವೆ ಎಂದು ಹೇಳಿದ್ದ. ಆ ನದಿಯಲ್ಲಿ ಭಯಂಕರ ಮೊಸಳೆಗಳಿವೆ ಎಂದೂ ದ್ವೀಪದಲ್ಲೀಗ ಭೂತಗಳು ಸೇರಿಕೊಂಡಿವೆ ಎಂದೂ ಹೆದರಿಸಿದ್ದ. ಅವನ ವಿವರಣೆಗಳನ್ನೆಲ್ಲ ಕೇಳಿ ನಮಗೆ ಅಲ್ಲಿಗೆ ಹೋಗಿ ಬರಬೇಕು ಎಂದೇನೂ ಅನ್ನಿಸುತ್ತಿತ್ತು. ಆದರೆ ಅದು ಈ ವರೆಗೆ ಸಾದ್ಯವಾಗಿರಲ್ಲಿಲ್ಲ. ಈಗ ಹೇಗೋ ೮-೧೦ ದಿನ ರಜೆ ಉಳಿದಿರುವುದರಿಂದ ಅಲ್ಲಿಗೆ ಹೋಗಿ ಬರೋಣ ಅಂದು ನಿರ್ಧರಿಸಿದೆವು. ಅರುಣ ತಾನು ಬರುತ್ತೇನೆ ಎಂದು ಹಠ ಹಿಡಿದ. ನಮಗೆ ಅವನನ್ನು ಕರೆದುಕೊಂಡು ಹೋಗುವುದೇನು ಸಮಸ್ಯೆಯಾಗಿರಲ್ಲಿಲ್ಲ. ಆದರೆ ಅವನ ಮನೆಯವರನ್ನು ಒಪ್ಪಿಸುವುದೇ ಸಮಸ್ಯೆಯಾಗಿತ್ತು. ರಾಘು ಮರುದಿನ ನಮ್ಮ ಮನೆಯಲ್ಲೇ ಉಳಿದುಕೊಳ್ಳುವುದು, ಕೊನೆಗೆ ಒಟ್ಟಿಗೆ ಎಲ್ಲರೂ ಮುಂಜಾನೆ ಎದ್ದು ಹೊರಡುವುದು ಎಂದು ನಿರ್ಧಾರವಾಯಿತು.

ನಮ್ಮ ಮನೆಯಲ್ಲಿ ಅಜ್ಜ ಒಪ್ಪಿಕೊಂಡರೂ ಅಜ್ಜಿಯನ್ನು ಒಪ್ಪಿಸುವುದು ಸ್ವಲ್ಪ ಕಷ್ಟ ವಾಯಿತು. ಅರುನನಂತೂ ಒಂದು ದಿನವಿಡೀ ಅಳುತ್ತ, ಊಟ ಬಿಟ್ಟು ಹೆದರಿಸಿ ಮನೆಯಲ್ಲಿ ಒಪ್ಪಿಸಿದ್ದ. ರಾಘು ಸಂಜೆ ತನ್ನ ಗಂಟು, ಮೂಟೆ ಹೊತ್ತುಕೊಂಡು ನಮ್ಮ ಮನೆಗೆ ಬಂದ. ರಾಘುವಿನ ಅತ್ತೆ ಕುಟ್ಟವಲಕ್ಕಿ ಮಾಡಿ ಕೊಟ್ಟಿದ್ದರು. ಏಳೆಂಟು ಎಲೆ ಸವತೆ ಕಾಯಿ ತಂದಿದ್ದ. ನಮ್ಮ ಮನೆಯಲ್ಲಿ ಅಜ್ಜಿ ಚಪಾತಿ ತಯಾರಿಸಿ ಇಟ್ಟಿದ್ದರು. ಅರುಣ ತಾನು ಘಟ್ಟಕ್ಕೆ ಹೊರಡುವ ಸುದ್ದಿಯನ್ನು ಊರ ತುಂಬ ತಮಟೆ ಹೊಡೆದುಕೊಂಡು ಬಂದಿದ್ದ. ರಾತ್ರಿ ಕನಸಲ್ಲಂತೂ ನಮಗೆ ಹುಲಿ, ಕಾಡುಕೋಣದ್ದೆ ದ್ರಶ್ಯ. ಕಾಡುಕೋಣ ವೊಂದು ನನ್ನನ್ನು ಅಟ್ಟಿಸಿಕೊಂಡು ಬಂದಂತೆ ಕನಸು. ಅಷ್ಟರಲ್ಲಿ ಯಾರೋ ತಟ್ಟಿ ಎಬ್ಬಿಸಿದರು. ನೋಡಿದರೆ ಬೆಳಕು ನಿಧಾನ ಬರುತ್ತಿತ್ತು.

ಮುಂದಿನ ಭಾಗದಲ್ಲಿ : ಘಟ್ಟದ ಹಾದಿ

Sunday, October 25, 2009

ನಮ್ಮ ಸಾಹಸ ಯಾತ್ರೆ - ಭಾಗ ೫ - ನಮ್ಮ ನಿರ್ಧಾರ
ಈಗೀಗ ನಾನು, ಶರತ್, ರಾಘು ಮುರೂಜನವೂ ಒಟ್ಟಿಗೆ ಸೇರುವುದೇ ಕಷ್ಟವಾಗಿದೆ. ಮೂವರೂ ನಮ್ಮ ನಮ್ಮ ಓದು, ಜೀವನ ಎಂದು ಬೇಟಿಯಾಗುವುದೇ ಅಪರೂಪ. ಹಾಗಿದ್ದಾಗಲೂ ಕಳೆದ ಬಾರಿ ಮೂವರು ಒಂದು ಹದಿನೈದು ದಿನಗಳು ಸೇರುವ ಸಂದರ್ಭ ಒದಗಿತ್ತು.ದಿನಾ ಮೂವರೂ ಕ್ರಿಕೆಟ್ ಆಡುವುದು, ಬೆಟ್ಟ ಸುತ್ತುವುದು ಮಾಡುತ್ತಿದ್ದೆವು. ನಮ್ಮ ಜೊತೆ ಅರುಣನೂ ಬರುತ್ತಿದ್ದ. ಒಂದು ದಿನ ರಾಘು ನಮ್ಮ ಮನೆಯಲ್ಲಿ ಉಳಿಯುವುದೆಂದು ನಿರ್ಧಾರವಾಯಿತು. ಮೊದಲ್ಲೆಲ್ಲಾ ಆತ ನಮ್ಮ ಮನೆಯಲ್ಲೊಂದಿು ದಿನ ನಾವು ಅವನ ಮನೆಯೋಲ್ಲೊಂದಿಷ್ಟು ದಿನ ಉಳಿಯುತ್ತಿದೆವು. ಅವರ ತೋಟಕ್ಕೆ ಹೋಗಿ ಗೇರು ಹಣ್ಣೋ, ಚಿಕ್ಕು ಹಣ್ಣೋ ತಿನ್ನುತ್ತಾ ಕೂರುತ್ತಿದ್ದೆವು. ಈಗ ಆ ಅಭ್ಯಾಸ ಬಿಟ್ಟು ಹೋಗಿತ್ತು. ಅವತ್ತು ಸಂಜೆ ನಾವು ನಾಲ್ವರೂ ಹತ್ತಿರದ ಗುಡ್ಡಕ್ಕೆ ಹೊರಟೆವು. ಅದು ಇದು ಮಾತನಾಡುತ್ತಾ ಗುಡ್ಡ ಹತ್ತಿದ್ದೇ ಗೊತ್ತಾಗಲ್ಲಿಲ್ಲ. ನಾನು, ರಾಘು ಇಬ್ಬರೂ ಗುಡ್ಡದಲ್ಲಿ ಹಳೆಯ ಘಟನೆಗಳನ್ನೆಲ್ಲ ನೆನಪಿಸಿಕೊಳ್ಳುತ್ತಿದ್ದೆವು. ಶರತ್, ಅರುಣ ಇಬ್ಬರೂ ಇಲ್ಲೇ ಕೆಳಗೆ ನೇರಳೆ ಮರ ಇದೆ. ಆ ಮರದಲ್ಲಿ ಹಣ್ಣಾಗಿದೆಯೆ ಎಂದು ನೋಡಿಕೊಂಡು ಬರುತ್ತೇವೆ ಅಂತ ಹೇಳಿ ಗುಡ್ಡವನ್ನು ಇಳಿಯತೊಡಗಿದರು. ಅದೊಂದು ಸುಂದರವಾದ ಸಂಜೆ. ತಣ್ಣಗೆ ಗಾಳಿ ಬೀಸುತ್ತಿತ್ತು. ಮುಗಿಲ್ಲೆಲ್ಲಾ ಸೂರ್ಯ ಮುಳುಗುತ್ತಿರುವ ಕಾರಣ ಕೆಂಪಾಗಿ ಕಾಣುತ್ತಿತ್ತು. ಸೂರ್ಯ ದೂರದ ಘಟ್ಟದ ಹಿಂದೆ ಜಾರುತ್ತಿದ್ದ. ನಾನು ನಮ್ಮ ಬಾಲ್ಯದ ನೆನಪುಗಳನ್ನು ಕೆದಕಿ ರಾಘುಗೆ ಹೇಳುತ್ತಿದ್ದೆ. ಆತನೂ ಆ ಕಾಲ ಮತ್ತೆ ಬಾರದೆಂದು ಕೊರಗುತ್ತಿದ್ದ. ಕೆಪ್ಪ ಸತ್ತು ಆಗಲೇ ಮೂರು ವರ್ಷಗಳಾಗಿತ್ತು. ಆತ ದೂರದಲ್ಲಿ ಕಾಣುವ ಘಟ್ಟದ ಬಗ್ಗೆ ಹೇಳಿದ ಕತೆ ನೆನಪಿಸಿದೆ.

Saturday, October 24, 2009

ನಮ್ಮ ಸಾಹಸ ಯಾತ್ರೆ - ಹಕ್ಕಿ ಮರಿಯೊಡನೆ ಒಂದು ದಿನ - ಭಾಗ ೪

ಹಾಕಿಯನ್ನು ಮನೆಗೆ ತೆಗೆದುಕೊಂಡು ಹೋದೆವು. ಒಂದು ರಟ್ಟಿನ ಪೆಟ್ಟಿಗೆಯ ತುಂಬ ಚಿಂದಿ ಬಟ್ಟೆಗಳನ್ನು ಹಾಸಿ ಅದರಲ್ಲಿ ಹಕ್ಕಿ ಮರಿಯನ್ನು ಮಲಗಿಸಿದೆವು. ನಾವು ನಂತರ ಮೈ ಕೈ ಒರೆಸಿಕೊಂಡು ಬಟ್ಟೆ ಬದಲಿಸಿದೆವು. ಆಗ ನಮ್ಮ ಅಜ್ಜಿ ಟವೆಲ್ ಗಳನ್ನು ಮೀನು ಹಿಡಿಯಲು ತೆಗೆದುಕೊಂಡು ಹೋಗಬೇಡಿರೆಂದು, ಅದು ಗಬ್ಬು ವಾಸನೆ ಹಿಡಿದು ನಿರುಪಯುಕ್ತವಾಗುತ್ತದೆಂದು ಬೈಯುತ್ತಿದ್ದರು. ನಾವ್ಯಾರೂ ಅವಳ ಮಾತು ಕೇಳುವ ಸ್ಥಿತಿಯಲ್ಲಿರಲ್ಲಿಲ್ಲ. ಸ್ನಾನದ ಶಾಸ್ತ್ರ ಮಾಡಿಕೊಂಡು ಬೆಟ್ಟದ ಕಡೆ ಓಡಿದೆವುಅಲ್ಲಿ ಎಷ್ಟು ಹುಡುಕಿದರೂ ಹಕ್ಕಿಯ ಗೂಡು ಕಂಡು ಬರಲ್ಲಿಲ್ಲ. ಕೊನೆಗೆ ಹಕ್ಕಿಯನ್ನು ನಾವೇ ಸಾಕೋಣ ಎಂದು ನಿರ್ಧರಿಸಿ ಮನೆಗೆ ಬಂದಾಗ ಹಕ್ಕಿ ಮರಿ ಬೆಪ್ಪಾಗಿ ಕುಳಿತ್ತಿತ್ತು. ಅದಕ್ಕೆ ಬಹುಷಃ ಆಹಾರ ಬೇಕಾಗಿರಬಹುದು ಎಂದುಕೊಂಡು ಯಾವ ಆಹಾರ ತಿನ್ನಿಸಬೇಕೆಂದು ಯೋಚಿಸಿದೆವು. ಅದು ಯಾವ ಜಾತಿ ಹಕ್ಕಿ ಎಂದು ತಿಳಿದಿರಲ್ಲಿಲ್ಲ. ಒಮ್ಮೆ ಬಾಳೆಹಣ್ಣು ತಿನ್ನಿಸಲು ಹೋಗಿ ಹಕ್ಕಿ ಉಸಿರು ಕಟ್ಟಿ ಸತ್ತಿದ್ದನ್ನು ನಾನು ತೇಜಸ್ವಿಯವರ ಪುಸ್ತಕದಲ್ಲಿ ಓದಿದ್ದೆ. ಕೊನೆಗೆ ಏನೂ ಹೊಳೆಯದೆ ಅದನ್ನು ಬಿಟ್ಟು ಬಿಡಬೇಕೆಂದು ಅಂದುಕೊಂಡೆವು. ಆದರೆ ನೆಲದ ಮೇಲೆ ಬಿಟ್ಟು ಬಂದರೆ ಯಾವುದಾದರು ನಾಯಿ, ಬೆಕ್ಕಿನ ಆಹಾರ ಆಗುವ ಸಾದ್ಯತೆ ಇತ್ತು. ಅದ್ದರಿಂದ ಶರತ್ ಒಂದು ಗೂಡು ತಂದ. ಆ ಗೂಡು ನಮಗೆ ಒಂದು ಬೇಸಿಗೆಯಲ್ಲಿ ಸಿಕ್ಕಿತ್ತು. ನೇರಳೆ ಮರಕ್ಕಾಗಿ ಅಲೆಯುತ್ತಿದ್ದಾಗ ಒಂದು ಮರದ ಮೇಲೆ ಈ ಗೂಡಿತ್ತು. ಆ ಗೂಡಿನಲ್ಲಿ ಮೂರು ಮೊಟ್ಟೆಗಳಿದ್ದವು. ಅದನ್ನು ಗೂಡಿನ ಸಮೇತ ತಂದು ನಾವೇ ಶಾಖ ಕೊಟ್ಟು ಮರಿ ಮಾಡಲು ಹೊಂಚು ಹಾಕಿದ್ದೆವು. ಅದು ಪಲಕಾರಿಯಾಗದೆ ಹಾಗೇ ಹೀಗೆ ಒಂದು ಮೊಟ್ಟೆ ಒಡೆದು ಹೋಯಿತು. ಇನ್ನೆರಡನ್ನು ನಾವೇ ಎಸೆದೆವು. ಆ ಗೂಡು ಈಗ ಹೇಗೆ ಉಪಕಾರಕ್ಕೆ ಬರುತ್ತದೆ ಎಂದು ತಿಳಿಯಲ್ಲಿಲ್ಲ. ಶರತ್ ಆ ಹಕ್ಕಿ ಮರಿಯನ್ನು ಗೂಡೊಳಗೆ ಕೂರಿಸಿ ಹಿತ್ತಲಿನ ಸಪೋಟ ಮರದ ಮೇಲೆ ಇಡಬೇಕೆಂದು ಅದು ತಾನಾಗಿ ಹಾರಿ ಹೋಗುತ್ತದೆ ಎಂದು ಹೇಳಿದ. ನನಗೂ ಸರಿ ಎನ್ನಿಸಿತು. ಕೊನೆಗೆ ಹಾಗೇ ಮಾಡಿದೆವು. ಆದರೆ ಮಧ್ಯಾಹ್ನ ವಾದರೂ ಅದು ಹಾರಿ ಹೋಗದ್ದನ್ನು ಕಂಡು ನನಗೆ ಗಾಭರಿಯಾಯಿತು. ನಮ್ಮ ಅಜ್ಜ ಅದು ಆಹಾರವಿಲ್ಲದೆ ಸಾಯುತ್ತದೆಂದು ಆದ್ದರಿಂದ ಎರೆ ಹುಳುವನ್ನಾದರೂ ಕೊಡಿ ತಿನ್ನುತ್ತದೇನೋ ಎಂದರು. ನಾನು ತಕ್ಷಣ ತೋಟಕ್ಕೆ ಓಡಿದೆ. ಅಲ್ಲಿ ಒಂದು ಟ್ಯಾಂಕಿನಲ್ಲಿ ಅಜ್ಜ ಗೊಬ್ಬರಕ್ಕಾಗಿ ಎರೆ ಹುಳು ಸಾಕಿದ್ದರು. ಒಂದೆರಡು ಎರೆ ಹುಳುವನ್ನೇನೋ ತಂದೆ ಆದರೆ ಅದನ್ನು ಹಕ್ಕಿ ಮರಿ ಹೇಗೆ ತಿನ್ನುತ್ತದೆ ಎಂದು ತಿಳಿಯಲ್ಲಿಲ್ಲ. ಆಗ ಅರುಣನ ಹತ್ತಿರ ಚಿಮುಟಿಗೆ ಇರುವುದು ಗಮನಕ್ಕೆ ಬಂತು. ತಕ್ಷಣ ಆತನನ್ನು ಓಡಿಸಿದೆ. ಆತ ತಂದ ಮೇಲೆ ಎರೆ ಹುಳುವನ್ನ ತಿನ್ನಿಸಿದೆ. ಕೊನೆಗೆ ಹಕ್ಕಿ ಮರಿಯನ್ನು ಹಾಗೇ ಮರದ ಮೇಲೆ ಬಿಟ್ಟು ಬಂದೆವು.

ಸಂಜೆ ನಾವು ಕ್ರಿಕೆಟ್ ಆಡಲು ಹೊರಟುಹೋದೆವು. ಆಗ ನಮ್ಮ ಅಜ್ಜ ಪಂಪ್ ಸೆಟ್ ಆನ್ ಮಾಡಲು ಹಿತ್ತಲಿಗೆ ಹೋಗಿದ್ದರಂತೆ. ತಾಯಿ ಹಕ್ಕಿ ಬಂದು ಕೂಗುತ್ತಿತ್ತಂತೆ. ಇದೂ ಕೂಗುತ್ತಿತ್ತಂತೆ. ನಾವು ಬಂದ ಮೇಲೆ ಅಜ್ಜ ಇವಿಷ್ಟನ್ನು ಹೇಳಿದರು. ತಕ್ಷಣ ನಾವು ಹಿತ್ತಿಲಿಗೆ ಹೋದೆವು. ಅಲ್ಲಿ ನೋಡಿದರೆ ಹಕ್ಕಿ ಮರಿ ಇರಲ್ಲಿಲ್ಲ. ನಮಗೆ ತುಂಬ ಬೇಜಾರಾಯಿತು. ಆದರೆ ಹಕ್ಕಿ ಸಾಕುವ ಕಷ್ಟವೂ ಅರಿವಿಗೆ ಬಂತು.

ಮುಂದಿನ ಭಾಗದಲ್ಲಿ - ನಮ್ಮ ನಿರ್ಧಾರ.
********************************************************************************
ವ್ಯಾಕರಣದಲ್ಲಿನ ದೋಷಕ್ಕಾಗಿ ಕ್ಷಮೆ ಇರಲಿ.

Friday, October 23, 2009

ನಮ್ಮ ಸಾಹಸ ಯಾತ್ರೆ - ಹಕ್ಕಿ ಮರಿಯೊಡನೆ ಒಂದು ದಿನ - ಭಾಗ ೩
ನಮ್ಮ ಅಜ್ಜನ ಮನೆಯ ಹಿಂದೆ ತೋಟಕ್ಕೆ ತಾಗಿಕೊಂಡು ಒಂದು ಜಲಪಾತ ಇದೆ. ಅದು ಚಿಕ್ಕ ಜಲಪಾತ. ಬೇಸಿಗೆಯಲ್ಲಿ ಒಣಗಿಕೊಂಡು ಇರುತ್ತಿತ್ತು. ಆದರೆ ಮಳೆಗಾಲದಲ್ಲಿ ಮಾತ್ರ ರೌದ್ರವತಾರ ತಾಳಿ ಕೆಂಪು ನೀರು ಭರ್ರ್ ಎಂದು ಬೀಳುತ್ತಿತ್ತು. ಹೀಗೆ ನೀರು ಬಿದ್ದು ಬಿದ್ದು ಒಂದು ಹೊಂಡವೇ ಉಂಟಾಗಿತ್ತು. ಬೇಸಿಗೆಯಲ್ಲಿ ನಾನು, ಶರತ್ ಮನೆಯಿಂದ ಒಂದು ಟವೆಲ್, ಬಾಟಲಿ ಹಾರಿಸಿಕೊಂಡು ಬಂದು ಮೀನು ಹಿಡಿಯುತ್ತಿದ್ದೆವು. ಹೊಂಡದಲ್ಲಿ ದೊಡ್ಡ ದೊಡ್ಡ ಮೀನುಗಳಿದ್ದರೂ ನಮಗೆ ಸಿಗುತ್ತಿದ್ದಿದ್ದು ಪುಡಿ ಮೀನುಗಳೇ. ಅದನ್ನು ಬಾಟಲಿಗೆ ತುಂಬಿ ಸಂತೋಷ ಪಡುತ್ತಿದ್ದೆವು. ಅವೇನು ಎರಡು ದಿನಕ್ಕಿಂತ ಜಾಸ್ತಿ ಬಾಟಲಿಯಲ್ಲಿ ಬದುಕುತ್ತಿರಲ್ಲಿಲ್ಲ.


ಜಲಪಾತದ ಇತ್ತೀಚಿಗಿನ ಫೋಟೋ, ಶರತ್ ತೆಗೆದಿದ್ದು.


ಒಂದು ದಿನ ಹೀಗೆ ಮೀನು ಹಿಡಿದು ಸುಸ್ತಾಗಿ ಹಾಗೆ ನೀರಿನಲ್ಲಿ ಬಿದ್ದುಕೊಂಡಿದ್ದೆವು. ಆಗ ಅರುಣ ಜಲಪಾತದ ಮೇಲಿನಿಂದ ಕೂಗುತ್ತಿರುವುದು ಕೇಳಿಸಿತು. ನಾವು ಎನೆದು ಕೇಳಿದೆವು. ಆತ ಬೇಗ ಬನ್ನಿ, ತಾನೊಂದು ಹಕ್ಕಿ ಮರಿ ಹಾರಲಾಗದೆ ಇದ್ದುದನ್ನು ನೋಡಿದೆ ಎಂದ. ಆತ ಕೂದಲು ಕಟ್ ಮಾಡಿಸಿಕೊಂಡು ಬರಲು ಹೋಗಿದ್ದನಂತೆ. ಬರುವಾಗ ದಾರಿಯ ಬದಿ ಬೆಟ್ಟದಲ್ಲಿ ಇದನ್ನು ಕಂಡನಂತೆ. ಇವಿಷ್ಟನ್ನೂ ಆತ ಒಂದೇ ಉಸುರಿಗೆ ಹೇಳಿದ. ನಾನು, ಶರತ್ ಹಾಗೆ ಆಶ್ಚರ್ಯದಿಂದ ಒಂದೇ ಕ್ಷಣದಲ್ಲಿ ಬೆಟ್ಟಕ್ಕೆ ಓಡಿದೆವು. ಅಲ್ಲಿ ನೋಡಿದರೆ ಎಲ್ಲೂ ಹಕ್ಕಿ ಕಾಣಲ್ಲಿಲ್ಲಅರುಣ ಬೆಟ್ಟು ಮಾಡಿ ತೋರಿಸಿದ, ಆದರೂ ಗುರುತಿಸಲಾಗಲ್ಲಿಲ್ಲ. ಅದು ತರಗೆಲೆಗಳ ಮದ್ಯೆ ಲೀನವಾಗಿತ್ತು. ಸ್ವಲ್ಪ ಹೊತ್ತಿನ ನಂತರ ಅದು ಹೆದರಿತು ಅಂತ ಅನ್ನಿಸುತ್ತೆ, ಓಡಲು ಶುರು ಮಾಡಿತು. ಆಗ ಅದನ್ನು ಕಂಡೆ. ಶರತ್ ಅದನ್ನು ಹಿಡಿಯಲು ಓಡಿದ. ಅದು ಕಾಲು ದಾರಿಯೊಂದನ್ನು ದಾಟಿ ಜಲಪಾತದ ಬುಡಕ್ಕೆ ಬಂತು. ನಾವು ಹೇಗೂ ಹಾರಲು ಬರುವುದಿಲ್ಲ ಈಗ ಸಿಕ್ಕಿಹಾಕಿಕೊಳ್ಳುತ್ತದೆ ಎಂದು ಎಣಿಸುತ್ತಿದ್ದಂತೆ ತೇಲಿಕೊಂಡು ಜಲಪಾತದ ಪಕ್ಕದಲ್ಲಿರುವ ತೋಟಕ್ಕೆ ಇಳಿಯಿತು. ಶರತ್, ಅರುಣ ಅದನ್ನು ಹಿಂಬಾಲಿಸಿಕೊಂಡು ತೋಟಕ್ಕೆ ಇಳಿದರು. ಅವರು ಇಳಿಯುವ ವೇಗ ಕಂಡು ಎಲ್ಲಿ ಇಬ್ಬರು ಬಿದ್ದು ಹಲ್ಲು ಮುರಿದುಕೊಲ್ಲುತ್ತಾರೋ ಎಂದುಕೊಂಡೆ. ಅಷ್ಟರಲ್ಲಿ ಅದು ತೋಟದ ಕಾಪಿ ಗಿಡದ ಬಳಿ ಇಳಿಯಿತು. ನಾನು ಅಲ್ಲಿಗೆ ಓಡಿದೆ, ಆದರೆ ಅದೆಲ್ಲಿ ಕುಟುಕಿಬಿಡುತ್ತದೋ ಎಂದು ಹೆದರಿ ಅದನ್ನು ಹಿಡಿಯಲ್ಲಿಲ್ಲ. ಕೊನೆಗೆ ಶರತ ನೇಅದನ್ನು ಹಿಡಿದ.

ಮುಂದಿನ ಭಾಗದಲ್ಲಿ - ಹಕ್ಕಿ ಏನಾಯ್ತು?

Thursday, October 22, 2009

ನಮ್ಮ ಸಾಹಸ ಯಾತ್ರೆ - ಮುದುಕನ ಕತೆ - ಭಾಗ - ೨

ನಮ್ಮ ಮನೆಗೆ ಆಗ ಒಬ್ಬ ಮುದುಕ ಕೆಲಸಕ್ಕೆ ಬರುತ್ತಿದ್ದ. ಆತನ ಹೆಸರು ಕೆಪ್ಪ ಎಂದು. ಆತ ಕಿವುದನೆನಲ್ಲ. ಆದರೂ ಆ ಹೆಸರೇಕೆ ಬಂತೋ ಗೊತ್ತಿಲ್ಲ. ಆತ ಯುವಕನಾಗಿದ್ದಾಗ ಈಗಿನ ನಾಲ್ಕು ಆಳುಗಳು ಮಾಡುವಷ್ಟು ಕೆಲಸವನ್ನು ಒಬ್ಬನೇ ಮಾಡುತ್ತಿದ್ದನಂತೆ. ಈಗ ವಯಸ್ಸಾಗಿದ್ದರಿಂದ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಇದ್ದ. ಆತನ ಬಾಯಲ್ಲಿ ರೋಚಕ ಕತೆಗಳನ್ನು ಕೇಳುವುದೆಂದರೆ ಮರೆಯಲಾಗದ ಅನುಭವ. ಮಲೆನಾಡಿನಲ್ಲಂತೂ ಮೂರು ಹೊತ್ತೂ ಬಚ್ಚಲ ಬೆಂಕಿ ಉರಿಯುತ್ತಿರುತ್ತದೆ. ಆ ಬೆಂಕಿಯ ಎದುರು ಕೂತು ಗೇರು ಬೀಜವನ್ನೋ, ಹಲಸಿನ ಬೀಜವನ್ನೋ ಸುತ್ತು ತಿನ್ನುತ್ತಾ ಕೆಪ್ಪನ ಕತೆ ಕೆಳುತ್ತಿದೆವು. ಆತ ಮುಖ್ಯವಾಗಿ ನಮ್ಮನ್ನು ರಂಜಿಸಲು ಭೂತ, ದೆವ್ವದ, ಕಾಡು ಪ್ರಾಣಿಗಳ ಕತೆ ಹೇಳುತ್ತಿದ್ದ. ನಮ್ಮ ಅಜ್ಜನ ತೋಟಕ್ಕೆ ತಾಗಿಕೊಂಡೇ ನಮ್ಮ ಚಿಕ್ಕ ಅಜ್ಜನ ತೋಟ ಇದೆ. ಅದರ ಹಿಂದೆ ಭೂತನ ಕಲ್ಲು ಇದೆ. ಅದಕ್ಕೆ ಕೋಣನ ತಲೆಯ ಭೂತ ಎಂದು ಹೆಸರು. ಕೆಪ್ಪ ಒಮ್ಮೆ ಅದೇ ದಾರಿಯಲ್ಲಿ ರಾತ್ರಿ ಬರುವ ಪ್ರಸಂಗ ಬಂದಿತ್ತಂತೆ. ಆಗ ಅಜ್ಜನ ತೋಟದಲ್ಲಿ ಕೋಣವೊಂದು ತಿರುಗಾಡುತ್ತಿದ್ದಂತೆ ಕಂಡು ಬಂತಂತೆ. ಅದನ್ನು ನೋಡಿ ಕೆಪ್ಪ ಯಾರದ್ದೋ ಕೋಣ ತಪ್ಪಿಸಿಕೊಂಡು ಬಂದಿದೆ ಎಂದುಕೊಂಡು ಹೂಶ್, ಹೂಶ್ ಎಂದನಂತೆ. ಅದು ಒಮ್ಮೆ ಹುಲಿಯಂತೆ ಘರ್ಜಿಸಿದಾಗ ಕೆಪ್ಪನ ಮೈ ಕೈ ಅದುರಲು ಶುರುವಾಯಿತಂತೆ. ಆಗ ಆಟ ಅಲ್ಲಿಂದ ಓಡಲು ಶುರು ಮಾಡಿದವನು ಮನೆಯ ತನಕ ನಿಲ್ಲಲ್ಲಿಲ್ಲವಂತೆ. ಹೀಗೆ ಅನೇಕ ಕತೆಗಳನ್ನು ಹೇಳುತ್ತಿದ್ದ. ಇನ್ನೊಂದು ಕತೆ ಹೀಗಿದೆ. ಒಮ್ಮೆ ಭಯಂಕರ ಮಳೆ ಬಂತಂತೆ. ಮಳೆ ನಿಂತ ನಂತರ ಕೆಪ್ಪ ತೋಟಕ್ಕೆ ಹೋಗಿದ್ದನಂತೆ. ಅಲ್ಲಿ ಹಲಸಿನ ಮರದ ಒಂದು ಕೊಂಬೆ ಮುರಿದು ಬಿದ್ದಿತ್ತಂತೆ. ಆ ಕೊಂಬೆಯಲ್ಲಿ ಮೂರು ಹಕ್ಕಿ ಮರಿಗಳು ಗೂಡಿನಲ್ಲಿ ಇದ್ದವಂತೆ. ಅದು ಯಾವ ಹಕ್ಕಿ ಮಾರಿಯೋ ಕೆಪ್ಪನಿಗೆ ತಿಳಿಯಲ್ಲಿಲ್ಲ. ಆಟ ಅವುಗಳನ್ನು ಮನೆಗೆ ತಂದು ಉಪಚರಿಸಿದನಂತೆ. ಮೂರು ಹಕ್ಕಿಗಳಲ್ಲಿ ಒಂದು ಮಾತ್ರ ಬದುಕಿತಂತೆ. ಅದು ಹೇಗೋ ಹಾರಲು ಕಲಿತು ಕಾಡಿಗೆ ಹಾರಿ ಹೋಯಿತಂತೆ. ಈಗ ಆ ಜಾತಿಯ ಯಾವುದೇ ಹಕ್ಕಿ ಕಂಡರೂ ಕೆಪ್ಪ ತಾನು ಸಾಕಿದ್ದು ಎಂದು ಹೇಳುತ್ತಾನೆ.ಇನ್ನೊಂದು ಭಾರಿ ಹಳೆ ಕತೆ. ಆಗ ಹುಲಿ, ಚಿರತೆ ಕಾಡುಗಳಲ್ಲಿ ಧಾರಾಳವಾಗಿ ಇದ್ದುವಂತೆ. ಒಮ್ಮೆ ಚಿರತೆಯೊಂದು ಇವನ ನಾಯಿ ಕದಿಯಲು ಬಂದಿತ್ತಂತೆ. ನಾಯಿ ಹೆದರಿ ಬೊಗಳಲು ಶುರು ಮಾದಿತ್ತಂತೆ . ಕೆಪ್ಪ ಹೊರಗೆ ಬಂದು ನೋಡಿದರೆ ಚಿರತೆ ! ಈತ ಸೊಂಟಕ್ಕೆ ಸಿಕ್ಕಿಸಿಕೊಂಡಿದ್ದ ಕತ್ತಿಯನ್ನು ಹಿರಿದು ಚಿರತೆಯೋದನೆ ಹೋರಾಡಲು ಅನಿಯಾದನಂತೆ. ಕೊನೆಗೆ ಚಿರತೆಯೇ ಓಡಿ ಹೋಯಿತಂತೆ. ಇದಾದ ಎರಡು ದಿನದ ನಂತರ ಒಮ್ಮೆ ಇವನ ನಾಯಿ ಮಂಗಗಳನ್ನು ಅಟ್ಟಿಸಿಕೊಂಡು ಕಾಡಿಗೆ taಹೋಗಿತ್ತಂತೆ. ಆಗ ಅದನ್ನು ಹಿಡಿದು ತಿಂದು ಮುಗಿಸಿತ್ತಂತೆ.ಆತ ಹೇಳುವ ಕತೆ ಎಷ್ಟು ನಿಜವೋ, ಸುಳ್ಳೂ ತಿಳಿಯುತ್ತಿರಲ್ಲಿಲ್ಲ . ಆದರೂ ಆತ ಕತೆ ಹೇಳುವ ಶೈಲಿ ನಮ್ಮನ್ನು ರಂಜಿಸುತ್ತಿತ್ತು. ಒಂದು ಬಾರಿ ರಜಕ್ಕೆ ಹೋದಾಗ ನಾವು ಹಕ್ಕಿ ಮರಿಯ ಕತೆ ಕೇಳಿ ನಮಗೊಂದು ಹಕ್ಕಿ ತಂದುಕೊಡು ಸಾಕುತ್ತೇವೆ ಎಂದು ಹೇಳಿದೆವು. ಆತ ಕೊನೆಗೂ ತಂದು ಕೊಡಲ್ಲಿಲ್ಲ . ಆದರೆ ಹಕ್ಕಿ ಸಾಕುವುದು ಎಷ್ಟು ಕಷ್ಟ ಎಂದು ಒಂದು ಘಟನೆಯಿಂದ ತಿಳಿಯಿತು.ಮುಂದಿನ ಭಾಗದಲ್ಲಿ : ಹಕ್ಕಿ ಮರಿಯೊಡನೆ ಒಂದು ದಿನ.

ನಮ್ಮ ಸಾಹಸ ಯಾತ್ರೆ - ಮುದುಕನ ಕತೆ - ಭಾಗ ೧


ನನ್ನ ಅಜ್ಜನ ಮನೆ ಬೆಟ್ಟ, ಕಣಿವೆಗಳ ಮದ್ಯೆ ಇದೆ. ಸುತ್ತ ಮುತ್ತ ಸುಂದರ ಪರಿಸರ. ಮಳೆಗಾಲದಲ್ಲಂತೂ ಎಲ್ಲೆಲ್ಲೂ ಹಸಿರು ತುಂಬಿಕೊಂಡಿರುತ್ತದೆ. ನಾನು, ನನ್ನ ತಮ್ಮ ಇಬ್ಬರೂ ರಜೆ ಬಂತೆಂದರೆ ಅಜ್ಜನ ಮನೆಯಲ್ಲೇ ಇರುತ್ತೇವೆ. ನಮ್ಮಿಬ್ಬರಿಗೂ ಹೇಗೋ ಪರಿಸರದ ಮೇಲೆ ಪ್ರೀತಿ ಬೆಳೆದಿತ್ತು. ಕಾಡು, ಬೆಟ್ಟ ನಿಗೂದತೆಯ ಹಾಗೆ ಅನ್ನಿಸುತ್ತಿತ್ತು. ಪ್ರತಿಯೊಂದು ಪ್ರಾಣಿ, ಪಕ್ಷಿಗಳ ಬಗ್ಗೆಯೂ ಕುತೂಹಲ. ಈ ರೀತಿಯ ಹುಚ್ಚನ್ನು ಹತ್ತಿಸಿಕೊಂದವರಲ್ಲಿ ನನ್ನ ಆಪ್ತ ಸ್ನೇಹಿತ ರಾಘು ಕೂಡ ಒಬ್ಬ. ನಾವು ಮೂವರು ಎಲ್ಲಾದರೂ ಸುತ್ತುತ್ತಿರುತ್ತೇವೆ. ಈಗೀಗ ನಮ್ಮ ಜೊತೆ ಅರುಣ ಕೂಡ ಬರುತ್ತಾನೆ.

ನನ್ನ ಅಜ್ಜ ಒಬ್ಬ ಕೃಷಿಕರು. ಮಲೆನಾಡಿನಲ್ಲಿ ಆಗ ಕೃಷಿ ಮಾಡಲು ಅನೇಕ ಉಪಟಳ ಇರುತ್ತಿತ್ತು. ಬೆಳೆದ್ದಿದ್ದರಲ್ಲಿ ಅರ್ದ ಭಾಗ ಮಂಗ, ಹಂದಿ ತಿಂದುಕೊಂಡು ಹೋಗುತ್ತಿದವು. ಇನ್ನು ಕಾಡುಕೋಳಿ ಇತ್ದ್ಯಾದಿ ಪಕ್ಷಿಗಳು ಸಹಿತ ತೊಂದರೆ ಕೊಡುತ್ತಿದವು. ಇವುಗಳನ್ನು ಹೊಡೆಯಲು ಅಜ್ಜ ಒಂದು ಕೇಪಿನ ಕೋವಿ ಇಟ್ಟುಕೊಂಡಿದ್ದರು. ನಾವು ಬ್ರಾಹ್ಮಣ ರಾದ್ದರಿಂದ ಮಾಂಸ ತಿನ್ನುತಿರಲ್ಲಿಲ್ಲ. ಅಜ್ಜ ಹೊಡೆದ ಮಂಗನನ್ನೋ, ಕಾಡುಕೊಳಿಯನ್ನೋ ಹೊತ್ತೊಯಲು ಒಬ್ಬ ಇರುತ್ತಿದ್ದ. ಅಜ್ಜ ತುಂಬ ಕಷ್ಟ ಸಹಿುಗಳಗಿದ್ದರು ಆಗಿನ ಕಾಲದಲ್ಲಿ ಈಗಿನಂತೆ ಪಂಪ್ ಸೆಟ್ ಇತ್ಯಾದಿ ಇರುತ್ತಿರಲ್ಲಿಲ್ಲ. ಆಗ ಕಾಲುವೆಯಿಂದ ನೀರು ಹೊತ್ತು ತೋಟಕ್ಕೆ ಹೊತ್ತೊಯುತ್ತಿದ್ದುದನ್ನು ನಾನೇ ಸ್ವತಃ ಕಂಡಿದ್ದೇನೆ. ನಮಗೆ ಪರಿಸರದ ಮೇಲೆ ಆಸಕ್ತಿ ಮೂಡುವಲ್ಲಿ ಅಜ್ಜನೇ ಮುಖ್ಯ ಕಾರಣ.

ನಮ್ಮ ಸಾಹಸ ಯಾತ್ರೆ - ಹಿನ್ನೆಲೆ

ಹಿನ್ನೆಲೆ:
ಇದು ನಾನು ಕಾಲೇಜ್ ನಲ್ಲಿರುವಾಗ ಬರೆದ ಕತೆ. ಆಗ ಕತೆ ಬರಿಯೋ ಹುಚ್ಚು. ಕತೆ ಬರಿಯೋವಾಗ ಕತೆಯ ಸಂದರ್ಭಕ್ಕೆ ತಕ್ಕಂತೆ ಚಿತ್ರ ಬರೆದಿದ್ದೆ. ಅದನ್ನು ಸಹ ಬ್ಲಾಗ್ ನಲ್ಲಿ ಹಾಕುತ್ತೇನೆ. ಕತೆ ಮೆಚ್ಚಿದರೆ ಖಂಡಿತ ತಿಳಿಸಿ. ಮುಖ್ಯವಾಗಿ ನಾನು ಪ್ರೀತಿಸುವ ಮಲೆನಾಡಿನ ಪರಿಸರ ಈ ಕತೆಯಲ್ಲಿ ಮೂಡಿ ಬಂದಿದೆ.

Friday, September 18, 2009

ಮಳೆಗಾಲದ ದೃಶ್ಯ ೧


ಮಲೆನಾಡಿನ ಮಳೆಗಾಲದ ಇನ್ನೊಂದು ದೃಶ್ಯ. ಹಿಂದೊಮ್ಮೆ ಇದೆ ತರಹದ ಪೇಂಟಿಂಗ್ ಪೋಸ್ಟ್ ಮಾಡಿದ್ದೆ. ಅದರ ಲಿಂಕ್

Saturday, September 5, 2009

ಹಳ್ಳಿಯ ದೃಶ್ಯ

ಈ ಚಿತ್ರದಲ್ಲಿ cool colors, warm colors combination ತುಂಬ ಚೆನ್ನಾಗಿತ್ತು, ನ್ಯೂಸ್ ಪೇಪರ್ ನಲ್ಲಿ ಬಂದ ಫೋಟೋ ನೋಡಿ ಖುಷಿಯಾಗಿ painting ಮಾಡಿದೆ.


Friday, August 28, 2009

rag picker boy


One more sketch from my college days !
There was a story about rag picker boy in a story book. He becomes literate at the end of the story. Photos in this book attracted me. I started sketching those in my practical record book. One such sketch is here in this post!

Thursday, July 16, 2009

ಹಳ್ಳಿ ದೃಶ್ಯಕೊಡಗಿನ ಸುಂದರ ದೃಶ್ಯ. ಇತ್ತೀಚಿಗೆ Paint ಮಾಡಿದ್ದು.

Sunday, June 21, 2009

ಸಂತೆ


ಸಂತೆಯಲ್ಲಿ ಮಡಿಕೆಗಳನ್ನು ಮಾರುತ್ತಿರುವ ಕುಂಬಾರ

Saturday, June 13, 2009

ಮಳೆಗಾಲದ ಒಂದು ದೃಶ್ಯ


ನಮ್ಮ ಕಡೆ ಹಳ್ಳಿ, ಹಳ್ಳಿಗೂ ಟಾರ್ ರೋಡ್ ಆಗಿದೆ. ಮಳೆಗಾಲದಲ್ಲಿ ರಸ್ತೆ ಮೇಲೆ ನೀರು ನಿಂತುಕೊಂಡು ಆ ದೃಶ್ಯ ನೋಡುವುದಕ್ಕೆ ಒಂದು ತರ ಖುಷಿ. ಹೀಗೆ ಒಂದು ಮಳೆಗಾಲದ ದೃಶ್ಯ ಈ painting ಮೂಲಕ ನಿಮ್ಮ ಮುಂದಿದೆ !

ಈ painting ಹೊಸದಾಗಿ ತಂದ drawing sheet ನಲ್ಲಿ ಮಾಡಿದ್ದು. ಈ sheet ನ ಗುಣಮಟ್ಟ ತುಂಬ ಚೆನ್ನಾಗಿದೆ.
ಇದೆ ತರಹದ painting ಹಿಂದೊಮ್ಮೆ post ಮಾಡಿದ್ದೆ. ಅದರ ಲಿಂಕ್ .

Saturday, June 6, 2009

Monday, May 18, 2009

Old man


ಬಿಸಿಲಿನಲ್ಲಿ ನಡಿಯುತ್ತಿರುವ ಅಜ್ಜ

Sunday, May 3, 2009

ಹೀಗೆ ಒಂದು ಮುಂಜಾನೆ...


Painting of a bright morning in malnad.
ಮಲೆನಾಡಿನ ತೋಟಗಳ ಮಧ್ಯದಿಂದ ತೂರಿ ಬರುತ್ತಿರುವ ಸೂರ್ಯನ ಕಿರಣವನ್ನ, ನನ್ನ painting ನಲ್ಲಿ ಹಿಡಿಯೋ ಪ್ರಯತ್ನ ಮಾಡಿದೀನಿ.

Saturday, April 25, 2009

ಕೆರೆಯ ದಡದಲ್ಲಿ ...


ಮತ್ತೊಂದು ಹಳೆಯ painting. ಸ್ವಲ್ಪ charcoal ಬಳಕೆ ಮಾಡಿದ್ದೇನೆ.

Saturday, April 18, 2009

Once upon a time
೧೯೯೮ ರ ಒಂದು painting. ಬೆಟ್ಟ, ಗುಡ್ಡ ಅಂತ ತಿರುಗುತಿದ್ದ ಸಮಯ. ಮಲೆನಾಡ ಪಕೃತಿ ಸೌಂದರ್ಯ ಈ painting ನಲ್ಲಿ ತರಿಸಲು ಪ್ರಯತ್ನಿಸಿದ್ದೇನೆ.
This is one of my old painting. There are lot of changes in my understanding of painting, now. But still perspective, composisition has been taken care in this painting.

Sunday, April 12, 2009

ಹೊನ್ನಮ್ಮನ ಕೆರೆ


ಈ ಸಲದ painting ನಾನು ಮಾಡಿದ್ದಲ್ಲ. ನನ್ನ ಮಾವನ ಮಗ ಸಚಿನ್ ತೈಲ ವರ್ಣದಲ್ಲಿ ಮಾಡಿದ್ದು.
This painting was done by my cousin Sachin. i liked this painting very much. I am amazed to see such a creativity at this tender age. He is just studying in pre-university college. There is a kind of 'abstract' ness in this painting.
I have seen this place. This place is called Honnammana kere. The boulders, which you see in this painting was home for some stone-age men. archeological department has found few broken pots, utensils of that age.
Amazing rendering !

Sunday, April 5, 2009

Walking ....


ಬೆಂಗಳೂರಿನ ಯಾವುದೇ ಪಾರ್ಕಿಗೆ ಹೋದರೆ, ಬೆಳಗ್ಗೆ, ಸಂಜೆ ಕಾಣುವ ದೃಶ್ಯ.

Sunday, March 29, 2009

A village temple


Every other scene in malnad (Western Ghats, Karnataka) inspires me a lot for painting. Predominantly cool colors depicts the cool morning atmosphere around this village temple.


Saturday, March 21, 2009

Kudle beach


Kudle beach is near temple town; Gokarna. (http://en.wikipedia.org/wiki/Kudle_beach).
During our beach trek from Gokarna to Om beach, i took this photo. We trecked on a hot summer day. This painting depicts the "hot"ness !

Saturday, March 14, 2009

ಕುದುರೆಮುಖದ ಒಂದು ದ್ರಶ್ಯ


ಈ ಚಿತ್ರ ೨೦೦೫ ರಲ್ಲಿ ಬಿಡಿಸಿದ್ದು.

Homage to my father

ಕುಟುಂಬದಲ್ಲಿ ಸಾವಾದರೆ ಅದನ್ನು ಅರಗಿಸಿಕೊಳ್ಳುವುದು ಕಷ್ಟ. ನನ್ನ ಅಪ್ಪ ಆರೋಗ್ಯವಗಿದ್ದವರು ಇದ್ದಕ್ಕಿದ್ದಂತೆ ಹೋಗಿಬಿಟ್ಟರು. ಅವರನ್ನು ಸಾವಿನ ದವಡೆಯಿಂದ ಪಾರು ಮಾಡಲು ಯಾವ ಡಾಕ್ಟರ್ ಗೂ ಆಗಲಿಲ್ಲಾ. ತೀರ ನೋವು ಪಟ್ಟು ಹೋಗಲ್ಲಿಲ್ಲ ಅನ್ನುವುದೊಂದೇ ಸಮಾದಾನ. ಇದೆಲ್ಲ ಒಂದು ದುಸ್ವಪ್ನದ ಹಾಗೆ ಕಾಣುತ್ತಿದೆ. ತೀರ ಹತ್ತಿರದವರಾದವರಿಗಂತೂ ಆ ನೋವು ತುಂಬಾ ದಿನಗಳವರೆಗೆ ಉಳಿದುಬಿಡುತ್ತದೆ. ಅಮ್ಮನಿಗಾದ ನೋವು ಊಹಿಸಿಕೊಳ್ಳುವುದು ಕಷ್ಟ.

ಸಾವಿನ ರಹಸ್ಯ ಇದುವರೆಗೆ ಯಾರಿಗೂ ತಿಳಿದಿಲ್ಲ. ಸಾವಿನ ನಂತರ ಏನು ಎಂದು ಎಲ್ಲ ಧರ್ಮಗಳೂ ಒಂದೊಂದು ವ್ಯಾಖ್ಯಾನ ಕೊಡುತ್ತವೆ. ಹಿಂದೂ ಧರ್ಮದಲ್ಲಿ ಸಾವಿನ ಬಗ್ಗೆ ಗರುಡ ಪುರಾಣದಲ್ಲಿ ವಿವರಣೆ ಸಿಗುತ್ತದೆ. http://www.sacred-texts.com/hin/gpu/index.htm. ಈ ಕರ್ಮಾಂಗಗಳನ್ನು ಮಾಡುವುದರಿಂದ ಮನಸ್ಸಿಗೆ ಒಂದು ತರ ಸಮಾಧಾನ ಸಿಗುವುದು ನಿಜ.

Sunday, February 15, 2009

Water in water color


Painting water in water color is a fun. Painting water is simple, Just paint the reflections, you are done. I took a photo of this painting in a bad light. You can observe my shade on the photo. Now, i do not have this painting with me :-(

Monday, February 2, 2009

ಹರಿದ್ವಾರ


On the banks of river Ganga. Picture of Haridwara. In this painting, getting a proper perspective view was a challenge.

Monday, January 26, 2009

ಚಿತ್ರಸಂತೆ...
೨೫ ಜನವರಿ ೨೦೦೯ ರಂದು ಕುಮಾರಕೃಪ ರಸ್ತೆಯಲ್ಲಿ ಚಿತ್ರ ಸಂತೆ ನಡೆಯಿತು. ಎಲ್ಲಿ ನೋಡಿದರೂ ಚಿತ್ರಗಳು. ಜಲವರ್ಣದ ಚಿತ್ರ ಎಲ್ಲ ಕಡೆಗೂ ಕಂಡು ಬಂತು. ವಿದ್ಯಾರ್ಥಿಗಳು, ಕಲಾವಿದರು ಬಾಗವಹಿಸಿದ್ದರು. ಜನರು Paintings ಖರೀದಿ ಮಾಡಿ ಕಲಾವಿದರನ್ನ ಪ್ರೋತ್ಸಾಹಿಸುತ್ತಿದ್ದರು. ಕೆಲವು ಕಡೆ ಕಲಾವಿದರು ಜನರನ್ನ ಎದುರು ಕೂರಿಸಿಕೊಂಡು ಅವರ ಭಾವಚಿತ್ರ ಬಿಡಿಸುತ್ತಿದ್ದರು. ಇಡಿ ಸಂತೆಯನ್ನ ನೋಡೋದಕ್ಕೆ ಕನಿಷ್ಠ ೨-೩ ಗಂಟೆ ಬೇಕಾಗಿತ್ತು. ಚಿತ್ರ ಕಲಾ ಪರಿಷತ್ತಿಂದ ಒಳ್ಳೆ ಕೊಡುಗೆ.

Saturday, January 24, 2009

ಹಳ್ಳಿ ದಾರಿಯಲ್ಲಿ ...


ಮಳೆಗಾಲದಲ್ಲಿ ನನ್ನ ಅಜ್ಜನ ಮನೆಗೆ ಹೋಗೋ ದಾರಿ ಯಾವಾಗಲು ಕೆಸರುಮಯ. ಹೀಗೆ ಒಮ್ಮೆ ಕಂಡ ದೃಶ್ಯ ಚಿತ್ರವಾಗಿ ಮೂಡಿ ಬಂದಿದೆ.

Friday, January 16, 2009

Lady walking through woodsMy another favorite is painting light and shades. This painting demonstrates that. Due to bad quality of paper, top-right portion has become a mess.

Saturday, January 10, 2009

Happiest day in my life4th Jan 2009 was Happiest day in my life. My son came to this world on this day. When i went to labor room, i was elated to see my newborn kid ! It was a feeling of great satisfaction, which can't be explained in words !!!

Thursday, January 1, 2009

ರಾಷ್ಟ್ರಕೂಟರ ರಾಜಧಾನಿ ಮಹಾಕೂಟ.

Mahakoota is a place with an ancient temple complex inside a leafy area. A perennial spring emerges from the complex and is said to be holy. The beautiful temple complex is worth a visit.