ನಾವು ಗುಹೆ ಹೊಕ್ಕುತ್ತಿದ್ದಂತೆ ಅವಾಂತರವೊಂದು ಎದುರಾಯ್ತು. ಒಂದು ನರಿಯು ಆ ಗುಹೆಯಲ್ಲಿ ಮನೆ ಮಾಡಿಕೊಂಡಿತ್ತು ಅಂತ ಅನ್ನಿಸುತ್ತೆ. ಅದು ಸೀದಾ ನಮ್ಮ ಮೇಲೆ ಹಾರಿಕೊಂಡು ಹೊರಗೆ ಹೋಯಿತು. ಗುಹೆ ಯ ಲ್ಲಿ ನಾಲ್ಕು ಜನ ಕೂತು ಕೊಳ್ಳುವಷ್ಟು ಜಾಗ ಧಾರಾಳವಾಗಿತ್ತು . ನಾನು, ರಾಘು ರಾತ್ರಿಯಿಡೀ ಉರಿಸಲು ಕಟ್ಟಿಗೆಯನ್ನು ತರಲು ಹೋದೆವು. ಅದೃಷ್ಟವಶಾತ್ ರಾಘು ಮನೆಗೆ ಹಿಂದಿರುಗಿದ್ದವನು ತನ್ನ ಚೀಲ ತಂದಿದ್ದ. ಅವನ ಚೀಲದಲ್ಲಿ ಒಂದಿಷ್ಟು ಬಟ್ಟೆ, ಸೋಪು, ಬೆಂಕಿ ಪೊಟ್ಟಣ, ಟಾರ್ಚ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇತ್ಯಾದಿಗಳಿದ್ದವು. ಅವನು ಸ್ಕೌಟ್ ಸೇರಿದ್ದರಿಂದ ಇವುಗಳನ್ನೆಲ್ಲ ಆತ ಮೊದಲೇ ಇಟ್ಟುಕೊಂಡಿದ್ದ. ನಾವು ಒಂದಿಷ್ಟು ಕಾಡಿನ ಹನ್ನುಗನ್ನು, ಸಿಹಿ ಗೆಣೆಸನ್ನುಒಟ್ಟು ಮಾಡಿ ತಂದೆವು. ವಾಪಸು ಗುಹೆಗೆ ಬರುವಷ್ಟರಲ್ಲಿ ಕತ್ತಲಾಗಿತ್ತು. ಶರತ್, ಅರುಣ ಆ ಮನೆಯವರು ನಮ್ಮನ್ನು ಹುಡುಕ್ಕುತ್ತಿರಬಹುದೇ ಎಂದು ಮಾತನಾಡುತ್ತಿದ್ದರು. ರಾಘು ಅಗ್ಗಿಷ್ಟಿಕೆ ರೆಡಿ ಮಾಡಿದ. ನಾವೆಲ್ಲರೂ ಸುತ್ತಲೂ ಕುಳಿತು ಅದೂ, ಇದೂ ಮಾತನಾಡಿಕೊಂಡೆವು. ರಾಘು ತನ್ನ ಸ್ಕೌಟ್ ಜೀವನದ ಅನುಭವಗಳನ್ನು ತಿಳಿಸಿದ. ದೂರದಲ್ಲೆಲ್ಲೋ ನರಿ ಕೂಗುತ್ತಿತ್ತು. ನಾವು ಗೆಣೆಸನ್ನು ಬೇಯಿಸಿಕೊಂಡು ತಿಂದೆವು. ಅರುಣ ಸುಸ್ತಾಗಿ ಮಲಗಿ ಬಿಟ್ಟ. ನಾನು ಮೂವರು ಸರದಿ ಪ್ರಕಾರ ಬೆಂಕಿ ಉರಿಯುವಂತೆ ನೋಡಿಕೊಳ್ಳಬೇಕು ಎಂದು ನಿರ್ಧಾರವಾಯಿತು. ಮದ್ಯೆ ಬೆಂಕಿ, ಸುತ್ತಲೂ ನಾವು ನಾಲ್ವರು. ಎಲ್ಲರ ಮುಖದ ಮೇಲೆ ...