Sunday, November 8, 2009

ನಮ್ಮ ಸಾಹಸ ಯಾತ್ರೆ - ಭಾಗ - ೧೩- ಗುಹೆಯಲ್ಲಿ ಒಂದು ರಾತ್ರಿ

ನಾವು ಗುಹೆ ಹೊಕ್ಕುತ್ತಿದ್ದಂತೆ ಅವಾಂತರವೊಂದು ಎದುರಾಯ್ತು. ಒಂದು ನರಿಯು ಆ ಗುಹೆಯಲ್ಲಿ ಮನೆ ಮಾಡಿಕೊಂಡಿತ್ತು ಅಂತ ಅನ್ನಿಸುತ್ತೆ. ಅದು ಸೀದಾ ನಮ್ಮ ಮೇಲೆ ಹಾರಿಕೊಂಡು ಹೊರಗೆ ಹೋಯಿತು. ಗುಹೆಲ್ಲಿ ನಾಲ್ಕು ಜನ ಕೂತು ಕೊಳ್ಳುವಷ್ಟು ಜಾಗ ಧಾರಾಳವಾಗಿತ್ತು . ನಾನು, ರಾಘು ರಾತ್ರಿಯಿಡೀ ಉರಿಸಲು ಕಟ್ಟಿಗೆಯನ್ನು ತರಲು ಹೋದೆವು. ಅದೃಷ್ಟವಶಾತ್ ರಾಘು ಮನೆಗೆ ಹಿಂದಿರುಗಿದ್ದವನು ತನ್ನ ಚೀಲ ತಂದಿದ್ದ. ಅವನ ಚೀಲದಲ್ಲಿ ಒಂದಿಷ್ಟು ಬಟ್ಟೆ, ಸೋಪು, ಬೆಂಕಿ ಪೊಟ್ಟಣ, ಟಾರ್ಚ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇತ್ಯಾದಿಗಳಿದ್ದವು. ಅವನು ಸ್ಕೌಟ್ ಸೇರಿದ್ದರಿಂದ ಇವುಗಳನ್ನೆಲ್ಲ ಆತ ಮೊದಲೇ ಇಟ್ಟುಕೊಂಡಿದ್ದ. ನಾವು ಒಂದಿಷ್ಟು ಕಾಡಿನ ಹನ್ನುಗನ್ನು, ಸಿಹಿ ಗೆಣೆಸನ್ನುಒಟ್ಟು ಮಾಡಿ ತಂದೆವು. ವಾಪಸು ಗುಹೆಗೆ ಬರುವಷ್ಟರಲ್ಲಿ ಕತ್ತಲಾಗಿತ್ತು. ಶರತ್, ಅರುಣ ಆ ಮನೆಯವರು ನಮ್ಮನ್ನು ಹುಡುಕ್ಕುತ್ತಿರಬಹುದೇ ಎಂದು ಮಾತನಾಡುತ್ತಿದ್ದರು. ರಾಘು ಅಗ್ಗಿಷ್ಟಿಕೆ ರೆಡಿ ಮಾಡಿದ. ನಾವೆಲ್ಲರೂ ಸುತ್ತಲೂ ಕುಳಿತು ಅದೂ, ಇದೂ ಮಾತನಾಡಿಕೊಂಡೆವು. ರಾಘು ತನ್ನ ಸ್ಕೌಟ್ ಜೀವನದ ಅನುಭವಗಳನ್ನು ತಿಳಿಸಿದ. ದೂರದಲ್ಲೆಲ್ಲೋ ನರಿ ಕೂಗುತ್ತಿತ್ತು. ನಾವು ಗೆಣೆಸನ್ನು ಬೇಯಿಸಿಕೊಂಡು ತಿಂದೆವು. ಅರುಣ ಸುಸ್ತಾಗಿ ಮಲಗಿ ಬಿಟ್ಟ. ನಾನು ಮೂವರು ಸರದಿ ಪ್ರಕಾರ ಬೆಂಕಿ ಉರಿಯುವಂತೆ ನೋಡಿಕೊಳ್ಳಬೇಕು ಎಂದು ನಿರ್ಧಾರವಾಯಿತು. ಮದ್ಯೆ ಬೆಂಕಿ, ಸುತ್ತಲೂ ನಾವು ನಾಲ್ವರು. ಎಲ್ಲರ ಮುಖದ ಮೇಲೆ ಬೆಂಕಿಯಾ ಬೆಳಕು ಕುಣಿಯುತ್ತಿತ್ತು. ನನಗೆ ನಾವು ಯಾವುದೋ ಹೊಸ ಪ್ರಪಂಚಕ್ಕೆ ಬಂದಂತೆ ಅನ್ನಿಸಿತು. ಈ ಲೋಕಕ್ಕೆ ನಮಗೆ ಇದ ಒಂದೇ ಒಂದು ಅರಿವು ಎಂದರೆ ದೂರದಲ್ಲೆಲ್ಲೋ ಕೂಗುತ್ತಿದ್ದ ಕಾಡಿನ ಹಕ್ಕಿ, ಜೀರುಂಡೆಗಳು. ಆ ರಾತ್ರೆಯನ್ನು ಮಾತ್ರ ನಾನೆಂದೂ ಮರೆಯಲಾರೆ.
ಬೆಳಗ್ಗೆ ಚಳಿಯಿಂದ ಎಚ್ಚರಾಯಿತು. ರಾತ್ರೆ ಶರತ್ ತನ್ನ ಸರದಿ ಬಂದಾಗ ನಿದ್ದೆ ತಡೆಯಲಾರದೆ ಮಲಗಿಬಿಟ್ಟಿದ್ದ. ಇನ್ನೂ ಬೆಳಕು ಮೂಡಿರಲ್ಲಿಲ್ಲಬೆಂಕಿ ನಂದಿ ಹೋಗಿ ಕೆಂಡ ಉಳಿದಿತ್ತು. ನಾನು ಕತ್ತಲಲ್ಲೇ ಬೆಂಕಿ ಪೊಟ್ಟಣ ಹುಡುಕಿ ಬೆಂಕಿ ರೆಡಿ ಮಾಡಿದೆ. ಸಮಯ ಇನ್ನು ಬೆಳಗ್ಗೆ ನಾಲ್ಕು ಐವತ್ತಾಗಿತ್ತು. ನಾನು ಮತ್ತೆ ಮಲಗಿದೆ. ಕೊನೆಗೆ ಎದ್ದಾಗ ಸಮಯ ಆರೂವರೆ. ರಾಘು ಆಗಲೇ ಎದ್ದಿದ್ದ. ನಾನು ಎದ್ದು ಮುಖ ತೊಳೆದುಕೊಂಡು ಬಂದೆ. ಸುಮಾರು ಎಂಟು ಗಂಟೆಗೆ ನಮ್ಮ ಪ್ರಯಾಣ ಶುರುವಾಯಿತು. ನಾವು ದ್ವೀಪದ ದಡದಲ್ಲೇ ನಡೆಯುತ್ತಿದ್ದಾಗ ದೋಣಿ ಸಿಕ್ಕಿತು. ನಮಗೆಲ್ಲ ತುಂಬ ಸಂತೋಷವಾಯಿತು. ಒಂದೊಮ್ಮೆ ದೋಣಿ ಸಿಗದೇ ಹೋದರೆ ನಮ್ಮ ಗತಿ ಏನು? ನಾವು ಈ ದ್ವೀಪದಲ್ಲೇ ಬಂದಿಯಾಗುವ ಸಾಧ್ಯತೆಯನ್ನು ನಾನು ರಾಘುವಿಗೆ ಹೇಳಿದ್ದೆ. ಆತ ಹಾಗೇನಾದರು ಆದ್ರೆ ತಾನು ಈಜಿಕೊಂಡು ಹೋಗಿ ದೋಣಿಗೆ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳುತ್ತಿದ್ದ. ಅಷ್ಟು ದೂರ ಈಜುವುದು ಅಸಾದ್ಯ ಎಂದು ನನ್ನ ಭಾವನೆಯಾಗಿತ್ತು. ಈಗ ದೋಣಿ ಸಿಕ್ಕಿದ್ದು ಈ ದುಸ್ವಪ್ನಗಲಿಗೆಲ್ಲಾ ಕೊನೆ ಒದಗಿಸಿತ್ತು.

ಈ ಮದ್ಯೆ ಶರತ್ ಒಂದು ಬಳ್ಳಿ ನೋಡಿ ಹಾವು ಎಂದು ಹೆದರಿದ್ದ. ಕೊನೆಗೆ ಅದನ್ನು ಹತ್ತಿರ ಹೋಗಿ ನೋಡುವಷ್ಟರಲ್ಲಿ ಅದು ಒಂದು ದೊಡ್ಡ ಬಲ್ಲಿಯಾಗಿದ್ದು ಮರದ ತುಂಡಿಗೆ ಸುತ್ತಿಕೊಂಡಿತ್ತು. ಮರದ ಬಳ್ಳಿಯನ್ನು ಎಸೆದು ಬಳ್ಳಿಯನ್ನು ತೆಗೆದುಕೊಂಡು ಬಂದೆವು. ವಾಪಸು ಬರುವಾಗ ನನಗೆ ಹಿಂದಿನಂತೆ ಭಯವೇನೂ ಆಗಲಿಲ್ಲಾ. ಅವರ ಮನೆಗೆ ಹೋದಾಗ ಅವರು ನಾವು ವಾಪಾಸು ಮನೆಗೆ ಹೋದೆವೆಂದು ಯೋಚಿಸಿದ್ದರಂತೆ. ರಾಘು ನಾವು ಕಾಡಿನಲ್ಲಿ ದಿಕ್ಕು ತಪ್ಪಿ ಉಳಿಯಬೇಕಾಯಿತೆಂದು ರೈಲು ಬಿಟ್ಟ.
ಮುಂದಿನ ಭಾಗದಲ್ಲಿ : ಮನೆಯ ದಾರಿ.

No comments:

Post a Comment