Monday, November 2, 2009

ನಮ್ಮ ಸಾಹಸ ಯಾತ್ರೆ - ಭಾಗ -೧೧ - ನಿಗೂಡ ದ್ವೀಪ

ಬೆಳಗ್ಗೆ ಏಳು ಗಂಟೆಗೆ ಎಚ್ಚರವಾಯಿತು. ಶರತ್, ರಾಘು ಆಗಲೇ ಎದಿದ್ದರು. ಎದ್ದ ಮೇಲೆ ಮನೆಯ ವಿವರಗಳನ್ನೆಲ್ಲ ನೋಡಿದೆ. ಬಹಳ ಸುಂದರವಾದ ಹಳೆಯ ಕಾಲದ ಮನೆಯಾಗಿತ್ತು. ಮಲೆನಾಡಿನಲ್ಲಿ ಸಾಮಾನ್ಯವಾಗಿ ಕಂಡು ಬಂದಂತಹದೇ ಆಗಿತ್ತು. ಆ ಮನೆಯಲ್ಲಿ ನಾಲ್ಕು ಜನ ವಾಸವಾಗಿದ್ದರು. ಗಂಡ, ಹೆಂಡತಿ, ಮಗು ಹಾಗು ಒಂದು ಮುದುಕಿ ಇದ್ದರು. ಮುದುಕಿಗೆ ಬಹುಶಃ ಎಂಬತ್ತೈದರ ವಯಸ್ಸು. ಆಕೆ ನಮ್ಮ ಅಜ್ಜ ಅವರನ್ನ ವಿಚಾರಿಸಿದರು.

ಅಷ್ಟರಲ್ಲಿ ತಿಂಡಿ ತಯಾರಾಗಿತ್ತು. ದೋಸೆಯ ಜೊತೆ ನೆಂಜಿಕೊಳ್ಳಲು ಜೇನುತುಪ್ಪ ಬಹಳ ಸೊಗಸಾಗಿತ್ತು. ಅವರ ಮನೆಯಿಂದ ದೂರದಲ್ಲಿ ನದಿ ಕಾಣುತ್ತಿತ್ತು. ನಾವು ಬೆಳಗ್ಗೆ ಬಿಸಿಲು ಬಿದ್ದ ಮೇಲೆ ಸ್ನಾನಕ್ಕೆಂದು ನದಿಯ ಕಡೆಗೆ ಹೋದೆವು ಮಳೆಗಾಲದಲ್ಲಾದರೆ ಇನ್ನೂ ಹತ್ತು ಅಡಿ ಜಾಸ್ತಿ ದೂರ ನೀರು ಬರುತ್ತಿತ್ತು ಅಂತ ಅನ್ನಿಸುತ್ತೆ. ಸ್ವಲ್ಪ ದೂರ ಬಂಡೆಗಳಿದ್ದವು ನಂತರ ಸ್ವಲ್ಪ ಅಳವಿರುವ ಸ್ಥಳ ಇತ್ತು. ನೀರು ಮಳೆಗಾಲದ ಮಣ್ಣು ನೀರಾಗಿರದೆ ಸ್ವಚ್ಚವಾಗಿತ್ತು. ಆದರೆ ನೀರಿಗಿಳಿದ್ದಿದ್ದೆ ಥರ ಥರ ನಡುಗುವಷ್ಟು ಶೀತ ಇತ್ತು. ಅರುಣ, ನಾನು ಈಜು ಬಾರದವರು ಸುಮ್ಮನೆ ನೀರಲ್ಲಿ ಆಟ ಆಡುತ್ತಿದ್ದೆವು. ಶರತ್, ರಘು ಈಜು ಹೊಡೆಯುತ್ತಿದ್ದರು. ಸ್ವಲ್ಪ ಹೊತ್ತಾದ ಮೇಲೆ ಒದ್ದೆ ಟವೆಲ್ ಬಂದೆ ಮೇಲೆ ಒಣಗಿಸಿ ಹಾಗೆಯೇ ಬಿಸಿಲ್ಲಲ್ಲಿ ಬಿದ್ದುಕೊಂಡೆ. ರಾಘು ನನ್ನ ಮೇಲೆ ತಣ್ಣೀರು ಹಾಕಿ ಎಬ್ಬಿಸಿದ. ಆಟ ನಾವು ದೂರದಲ್ಲಿ ಕಾಣುವ ದ್ವೀಪಕ್ಕೆ ಹೋಗೋಣ ಎಂದು ಕೇಳುತ್ತಿದ್ದ. ನಾನು ಹೇಗೆಂದು ಕೇಳಿದಾಗ ತಾನು, ಶರತ್ ಒಂದು ದೋಣಿಯನ್ನು ಪತ್ತೆ ಮಾಡಿದ್ದೆವೆಂದೂ, ಅದರಲ್ಲಿ ನಾಲ್ವರೂ ಹೋಗಬಹುದೆಂದು ಹೇಳಿದ. ಆದರೆ ಈಜು ಬಾರದ ನನಗೆ ದೋಣಿ ಅಕಸ್ಮಾತ್ ಮಗಚಿದರೆ ಏನು ಗತಿ ಎಂದು ಭಯವಾಯಿತು.
ಕೊನೆಗೆ ಅರುಣ ಕೂಡ ಒಪ್ಪಿಕೊಂಡು ಕುಣಿಯುತ್ತಿದ್ದದ್ದರಿಂದ ನಾನು ಒಪ್ಪಿಕೊಳ್ಳಬೇಕಾಯಿತು. ಆದರೆ ನಾವು ಆ ಮನೆಯವರಿಗೆ ತಿಳಿಸದೇ ಬರುವ ಹಾಗಿರಲ್ಲಿಲ್ಲ. ಮುಂದಾಳತ್ವ ವಹಿಸಿದ ರಾಘು ತಾನು ಹೇಳಿ ಬರುತ್ತೇನೆಂದು ಹೊರಟ. ಇಲ್ಲದ್ದಿದ್ದರೆ ಅವರು ಊಟಕ್ಕೆ ನಮ್ಮನ್ನು ಕಾಯುತ್ತಿದ್ದರು. ಕೊನೆಗೆ ನಾವು ಹೊರತ್ತದ್ದಾಯಿತು. ನಾನು ರಾಘು ಹುಟ್ಟು ಹಾಕುತ್ತಿದ್ದೆವು. ಅರುಣ ನೀರಿಗೆ ಕೈ ಇಳಿಬಿಟ್ಟು ಆಟವಾಡುತ್ತಿದ್ದ. ಶರತ್, ಅರುಣ ಇಬ್ಬರೂ ಮದ್ಯೆ ಕೂತಿದ್ದರು. ಅಂತಾ ಸೆಳೆತವೇನೂ ಇರದ್ದಿದ್ದರೂ ನನಗೆ ನದಿಯ ಮದ್ಯೆ ಹೋಗುವಷ್ಟರಲ್ಲಿ ವಿಪರೀತ ಗಾಭರಿಯಾಯಿತು. ನನ್ನೊಬ್ಬನನ್ನು ಬಿಟ್ಟು ಉಳಿದ ಮೂವರು ನಿಶ್ಚಿಂತೆಯಿಂದ ಇದ್ದರು. ನಾನು ಆ ಮನೆಯವರು ಹೇಗೆ ಒಪ್ಪಿಗೆ ಕೊಟ್ಟರು ಎಂದು ಆಶರ್ಯ ದಲ್ಲಿದ್ದೆ. ಕೊನೆಗೆ ಆತನ್ನನ್ನು ಕೇಳಿದಾಗ ಆತ ನಾವು ದ್ವೀಪಕ್ಕೆ ಹೋಗುವ ಬಗ್ಗೆ ಅವರಿಗೆ ತಿಳಿಸಿರಲೇ ಇಲ್ಲ! ತಾವು ಕಾಡು ತಿರುಗಲು ಹೋಗುತ್ತೇವೆ ಆದ್ದರಿಂದ ಮಧ್ಯಾಹ್ನದ ಊಟಕ್ಕೆ ಬರಲ್ಲಗುವುದಿಲ್ಲ ಅಂತ ಅಷ್ಟೆ ಹೇಳಿದ್ದ. ನಾನು ಕೆಪ್ಪ ಹೇಳಿದ್ದ ದ್ವೀಪವೇ ಇದಾಗಿರಬಹುದು ಎಂದು ಆಲೋಚಿಸುತ್ತಾ ಅಲ್ಲಿರಬಹುದಾದ ಭೂತ, ನಿಗೂಡತೆಯ ಬಗ್ಗೆ ಚಿಂತಿಸುತ್ತಿದ್ದೆ. ಕೊನೆಗೆ ಅರ್ದ ಗಂಟೆ ಹುಟ್ಟು ಹಾಕಿದ ಮೇಲೆ ನಾವು ದ್ವೀಪವನ್ನು ತಲುಪಿದೆವು.
ದ್ವೀಪದ ಹೊರಗೆಲ್ಲಾ ಜಿಗ್ಗು, ಪೊದೆ ಬೆಳೆದುಕೊಂಡಿದ್ದರೂ ದ್ವೀಪದ ಮದ್ಯೆ ಹೋಗುತ್ತಿದ್ದಂತೆ ಪಾಲು ಬಿದ್ದ ಮನೆಗಳು ಕಂಡು ಬಂದವು. ಮದ್ಯೆ ಕೆರೆಯನ್ತಿರುವ ಯಾವುದೋ ಹೊಂಡ ಕಂಡು ಬಂತು. ಇವುಗಳನ್ನು ಬಿಟ್ಟರೆ ಇನ್ನ್ಯಾವುದೇ ವಿಶೇಷ ಕಂಡು ಬರಲ್ಲಿಲ್ಲ.

5 comments:

 1. """" ಸುಂದರವಾದ ಲೇಖನ """''

  ReplyDelete
 2. ಥ್ಯಾಂಕ್ಸ್ ... ಎಲ್ಲ ಭಾಗಗಳನ್ನೂ ಓದಿ.

  ReplyDelete
 3. ಇದೇನು ಪತ್ತೇದಾರಿ ಕಥೆಯೇ .....? ನಿಮ್ಮ ಜಲವರ್ಣ ಚಿತ್ರಗಳು ಸು೦ದರವಾಗಿವೆ. ಧನ್ಯವಾದಗಳು.

  ReplyDelete
 4. ಪತ್ತೇದಾರಿ ಕತೆಯೇನಲ್ಲ....!

  ReplyDelete
 5. ಇವಲ್ಲ ನಾನು ನನ್ನ ಬಾಲ್ಯದಲ್ಲಿ ನೋಡಿದ್ದ, ಮಾಡಿದ್ದು. ಕತೆಯ ರೂಪದಲ್ಲಿ ಬರೆದ್ದಿದ್ದೇನೆ.

  ReplyDelete