Posts

ಕಾಳಿ ನದಿಯ ಸೊಬಗು.

Image
ದೋಣಿಯಿಂದ ಸೊಬಗು ಇನ್ನು ಹೆಚ್ಚಿದೆ ...ನೀವೇನಂತೀರಾ ?

ಕಪ್ಪು ಬಿಳುಪು

Image
ಕೂಡಲ ಸಂಗಮಕ್ಕೆ ಹೋದಾಗ ಈ ಎತ್ತಿನ ಗಾಡಿ ಕಣ್ಣಿಗೆ ಬಿತ್ತು. ಒಂದು ಬಿಳಿ, ಒಂದು ಕಪ್ಪು ಎತ್ತು ಸೋಜಿಗವೆನಿಸಿತು. ಅದರ painting ಇಲ್ಲಿದೆ.

Lost Empire - Hampi

Image
ಹಜಾರ ರಾಮ ದೇವಸ್ಥಾನ, ಹಂಪಿ

Munnar boats

Image
ಇದೆ ತರ boat ಗಳ ಚಿತ್ರ ಈ ಹಿಂದೆ ಹಾಕಿದ್ದೆ. ಅದರ link

ನಮ್ಮ ಸಾಹಸ ಯಾತ್ರೆ - ಭಾಗ - ೧೪ - ಮನೆಯ ದಾರಿ

ನಾವು ಆ ದಿನವೇ ಮನೆಗೆ ಹಿಂದ್ಹಿರುಗುತ್ತೇವೆ ಎಂದು ಅವರಿಗೆ ತಿಳಿಸಿದೆವು. ಅವರ ತೀರ ಒತ್ತಾಯದಿಂದ ಒಂದು ದಿನವಿಡೀ ಅಲ್ಲಿ ಇರಬೇಕಾಗಿ ಬಂತು. ಸಂಜೆ ತಾನು ತಿರುಗಾಡಲು ಕರೆದುಕೊಂಡು ಹೋಗುತ್ತೇನೆಂದು ಅವರು ತಿಳಿಸಿದರು. ಮಧ್ಯಾನ ಒಂದು ನಿದ್ದೆ ತೆಗೆದ ಮೇಲೆ ಅವರ ಜೊತೆ ನಾವು ಹೊರಟೆವು. ಅರುಣ ತನ್ನ ಕೈಯಲ್ಲಿ ನಡೆಯಲು ಆಗುವುದಿಲ್ಲ ಎಂದು ಮನೆಯಲ್ಲೇ ಉಳಿದ. ನಮ್ಮ ಜೊತೆ ಬಂದವರ ಕೈಯಲ್ಲಿ ಬೆಣಚು ಕಲ್ಲಿನ ಉಂಡೆಯೊಂದಿತ್ತು. ನಾವು ಅದನ್ನು ಯಾಕೆ ಎಂದು ಕೇಳಿದಾಗ ಅದು ಹಂದಿಯನ್ನು ಸಾಯಿಸುವುದಕ್ಕೆ ಎಂದು ತಿಳಿಸಿದರು. ಆ ಉಂಡೆಯನ್ನು ಯಾವುದೋ ಬಾಲೆ ಗಿಡಕ್ಕೆ ಕಟ್ಟಿದರು. ಬಾಳೆಗಿಡ ಅಗೆಯಲು ಬಂದ ಹಂದಿ ಅದನ್ನೂ ಅಗೆದು ಉಂಡೆ ಸಿಡಿದು ಸ್ಥಳದಲ್ಲೇ ಸಾಯುತ್ತದೆಂದು ತಿಳಿಸಿದರು. ನಾವು ಕುತೂಹಲದಿಂದ ನೋಡಿದೆವು. ಬರುತ್ತಾ ಅವರು ದೂರದಿಂದ ಕಾಟಿಗಳ ಗುಂಪೊಂದನ್ನು ತೋರಿಸಿದರು. ಗುಂಪಿನಲ್ಲಿರುವ ಕಾಡುಕೋಣ ಗಳಿಂದ ಯಾವುದೇ ಭಯವಿಲ್ಲವೆಂದೂ, ಒಂಟಿಯಾಗಿದ್ದರೆ ಮಾತ್ರ ಅಪಾಯವೆಂದೂ ತಿಳಿಸಿದರು. ಆ ರಾತ್ರೆಯಿಡಿ ನಮಗೆ ಕಾಡುಕೋಣದ್ದೇ ಕನಸು. ಈ ದಿನ ಅರುಣನನ್ನು ನನ್ನ ಪಕ್ಕ ಮಲಗಿಸಿಕೊಳ್ಳದೆ ರಾಘುವಿನ ಬದಿಯಲ್ಲಿ ಮಲಗಿಸಿದೆ. ಆದರೆ ಅರುಣ ಒದ್ದರೂ ರಾಘುವಿಗೆ ಎಚ್ಹ್ಚ್ರವಾಗಲ್ಲಿಲ್ಲವಂತೆ. ರಾತ್ರೆ ಢಂ ಎಂದು ಶಬ್ದ ಕೇಳಿತು. ನಾನು ಹಂದಿ ಸತ್ತಿರಬಹುದು ಎಂದುಕೊಂಡು ಮಗ್ಗುಲಾಗಿ ಮಲಗಿದೆ. ಬೆಳಗ್ಗೆ ಗಡದ್ದಾಗಿ ತಿಂಡಿ ತಿಂದುಕೊಂಡು ವಾಪಾಸು ಹೊರಟೆವು. ಹಿಂದಿನ ದಿನ ಮಂಕಾಗಿ...

ನಮ್ಮ ಸಾಹಸ ಯಾತ್ರೆ - ಭಾಗ - ೧೩- ಗುಹೆಯಲ್ಲಿ ಒಂದು ರಾತ್ರಿ

ನಾವು ಗುಹೆ ಹೊಕ್ಕುತ್ತಿದ್ದಂತೆ ಅವಾಂತರವೊಂದು ಎದುರಾಯ್ತು. ಒಂದು ನರಿಯು ಆ ಗುಹೆಯಲ್ಲಿ ಮನೆ ಮಾಡಿಕೊಂಡಿತ್ತು ಅಂತ ಅನ್ನಿಸುತ್ತೆ. ಅದು ಸೀದಾ ನಮ್ಮ ಮೇಲೆ ಹಾರಿಕೊಂಡು ಹೊರಗೆ ಹೋಯಿತು. ಗುಹೆ ಯ ಲ್ಲಿ ನಾಲ್ಕು ಜನ ಕೂತು ಕೊಳ್ಳುವಷ್ಟು ಜಾಗ ಧಾರಾಳವಾಗಿತ್ತು . ನಾನು, ರಾಘು ರಾತ್ರಿಯಿಡೀ ಉರಿಸಲು ಕಟ್ಟಿಗೆಯನ್ನು ತರಲು ಹೋದೆವು. ಅದೃಷ್ಟವಶಾತ್ ರಾಘು ಮನೆಗೆ ಹಿಂದಿರುಗಿದ್ದವನು ತನ್ನ ಚೀಲ ತಂದಿದ್ದ. ಅವನ ಚೀಲದಲ್ಲಿ ಒಂದಿಷ್ಟು ಬಟ್ಟೆ, ಸೋಪು, ಬೆಂಕಿ ಪೊಟ್ಟಣ, ಟಾರ್ಚ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇತ್ಯಾದಿಗಳಿದ್ದವು. ಅವನು ಸ್ಕೌಟ್ ಸೇರಿದ್ದರಿಂದ ಇವುಗಳನ್ನೆಲ್ಲ ಆತ ಮೊದಲೇ ಇಟ್ಟುಕೊಂಡಿದ್ದ. ನಾವು ಒಂದಿಷ್ಟು ಕಾಡಿನ ಹನ್ನುಗನ್ನು, ಸಿಹಿ ಗೆಣೆಸನ್ನುಒಟ್ಟು ಮಾಡಿ ತಂದೆವು. ವಾಪಸು ಗುಹೆಗೆ ಬರುವಷ್ಟರಲ್ಲಿ ಕತ್ತಲಾಗಿತ್ತು. ಶರತ್, ಅರುಣ ಆ ಮನೆಯವರು ನಮ್ಮನ್ನು ಹುಡುಕ್ಕುತ್ತಿರಬಹುದೇ ಎಂದು ಮಾತನಾಡುತ್ತಿದ್ದರು. ರಾಘು ಅಗ್ಗಿಷ್ಟಿಕೆ ರೆಡಿ ಮಾಡಿದ. ನಾವೆಲ್ಲರೂ ಸುತ್ತಲೂ ಕುಳಿತು ಅದೂ, ಇದೂ ಮಾತನಾಡಿಕೊಂಡೆವು. ರಾಘು ತನ್ನ ಸ್ಕೌಟ್ ಜೀವನದ ಅನುಭವಗಳನ್ನು ತಿಳಿಸಿದ. ದೂರದಲ್ಲೆಲ್ಲೋ ನರಿ ಕೂಗುತ್ತಿತ್ತು. ನಾವು ಗೆಣೆಸನ್ನು ಬೇಯಿಸಿಕೊಂಡು ತಿಂದೆವು. ಅರುಣ ಸುಸ್ತಾಗಿ ಮಲಗಿ ಬಿಟ್ಟ. ನಾನು ಮೂವರು ಸರದಿ ಪ್ರಕಾರ ಬೆಂಕಿ ಉರಿಯುವಂತೆ ನೋಡಿಕೊಳ್ಳಬೇಕು ಎಂದು ನಿರ್ಧಾರವಾಯಿತು. ಮದ್ಯೆ ಬೆಂಕಿ, ಸುತ್ತಲೂ ನಾವು ನಾಲ್ವರು. ಎಲ್ಲರ ಮುಖದ ಮೇಲೆ ...

ನಮ್ಮ ಸಾಹಸ ಯಾತ್ರೆ - ಭಾಗ - ೧೨ - ಧರೆಯ ಅಂಚಿನಲ್ಲಿ

ನನಗೆ ಹಸಿವಾಗತೊಡಗಿತು. ನಾವೆಲ್ಲರೂ ಆಹಾರವನ್ನು ಹುಡುಕಿಕೊಂಡು ಹೊರಟೆವು. ಅನೇಕ ತರಹದ ಹಣ್ಣುಗಳು ಸಿಕ್ಕಿದವು. ರಾಘು ಬರುತ್ತಾ ಉಳಿದಿದ್ದ ಸೌತೆಕಾಯಿಗಳನ್ನು ತಂದಿದ್ದ. ಎಲ್ಲವನ್ನೂ ಮುಗಿಸಿದ ಮೇಲೆ ಸುಮ್ಮನೆ ತಿರುಗಲು ಹೊರಟೆವು. ಇದುವರೆಗೂ ಸುಮ್ಮನೆ ಬರುತ್ತಿದ್ದ ಅರುಣ ಈಗ ತಲೆ ಹರಟೆ ಶುರು ಮಾಡಿದ್ದ. ಕೊನೆಗೆ ಹೀಗೆಲ್ಲ ಮಾಡಿದರೆ ಇಲ್ಲೇ ಬಿಟ್ಟು ಹೋಗುತ್ತೇವೆ ಎಂದು ಹೆದರಿಸಿದೆ. ನಾವು ದ್ವೀಪದಲ್ಲೆಲ್ಲ ಸುತ್ತು ಹೊಡೆಯುತ್ತಿದ್ದಂತೆ ನಿಜವಾಗಿಯೂದಾರಿ ತಪ್ಪಿ ಬಿಟ್ಟೆವು. ನನಗಂತೂ ವಿಪರೀತ ಗಾಬರಿಯಾಯಿತು. ಇದರ ಮದ್ಯೆ ನಮಗೊಂದು ಎತ್ತರ ಧರೆ ಎದುರಾಯಿತು. ರಾಘು ಈ ತರಹದ ಸಮಸ್ಯೆ ಅರಿತವ ನಿಧಾನಕ್ಕೆ ಹತ್ತಿದ. ಧರೆ ತೀರ ಕಡಿದಾಗಿರಲ್ಲಿಲ್ಲವಾದರೂ ಸಣ್ಣ ಸಣ್ಣ ಕಲ್ಲುಗಳಿಂದ ತುಂಬಿತ್ತು. ರಾಘು ಮೇಲೆ ಹತ್ತಿದವನು ಅಲ್ಲಿಂದ ಸಣ್ಣ ಬಳ್ಳಿಯನ್ನು ಇಳಿಸಿದ. ಅದು ನಮಗೆ ಆಧಾರಕ್ಕೆ ಯಾವ ರೀತಿಯಿಂದಲೂ ಸಾಲದಿದ್ದರೂ ಧೈರ್ಯ ಕೊಡಲು ಸಾಕಾಗಿತ್ತು. ನಾನು ಕೆಳಗೆ ಇದ್ದು ಅರುಣನನ್ನು ಹತ್ತಿಸಿದೆ. ನಂತರ ಶರತ್ ಹತ್ತತೊಡಗಿದ. ಆತನ ಭಾರಕ್ಕೆ ಆ ಬಳ್ಳಿ ಹರಿದು ಶರತ್ ಜಾರತೊಡಗಿದ. ನಾನು ತಕ್ಷಣ ಆತ ತೊಟ್ಟಿದ್ದ ಹವಾಯಿ ಚಪ್ಪಲಿಯನ್ನ ಕೆಳಗೆ ಎಸೆಯುವಂತೆ ಹೇಳಿದೆ. ಅವನು ಆಗಲೇ ಆ ಕೆಲಸ ಮಾಡುತ್ತಿದ್ದ. ಕೊನೆಗೆ ಹೇಗೋ ಮತ್ತೆ ಹತ್ತುವಷ್ಟರಲ್ಲಿ ಶರತ್ ನ ಮೈ ಕೈ ತರಚಿ ರಕ್ತ ಒಸರುತ್ತಿತ್ತು. ನಾನು ಭಯದಿಂದ ಹತ್ತಿದೆ. ರಾಘು ಶರತ್ ಗೆ ಪ್ರಥಮ ಚಿಕಿತ್ಸೆ ಅಂತ ಏನೇನೋ ಹಚ್...