Friday, November 6, 2009

ನಮ್ಮ ಸಾಹಸ ಯಾತ್ರೆ - ಭಾಗ - ೧೨ - ಧರೆಯ ಅಂಚಿನಲ್ಲಿ

ನನಗೆ ಹಸಿವಾಗತೊಡಗಿತು. ನಾವೆಲ್ಲರೂ ಆಹಾರವನ್ನು ಹುಡುಕಿಕೊಂಡು ಹೊರಟೆವು. ಅನೇಕ ತರಹದ ಹಣ್ಣುಗಳು ಸಿಕ್ಕಿದವು. ರಾಘು ಬರುತ್ತಾ ಉಳಿದಿದ್ದ ಸೌತೆಕಾಯಿಗಳನ್ನು ತಂದಿದ್ದ. ಎಲ್ಲವನ್ನೂ ಮುಗಿಸಿದ ಮೇಲೆ ಸುಮ್ಮನೆ ತಿರುಗಲು ಹೊರಟೆವು. ಇದುವರೆಗೂ ಸುಮ್ಮನೆ ಬರುತ್ತಿದ್ದ ಅರುಣ ಈಗ ತಲೆ ಹರಟೆ ಶುರು ಮಾಡಿದ್ದ. ಕೊನೆಗೆ ಹೀಗೆಲ್ಲ ಮಾಡಿದರೆ ಇಲ್ಲೇ ಬಿಟ್ಟು ಹೋಗುತ್ತೇವೆ ಎಂದು ಹೆದರಿಸಿದೆ. ನಾವು ದ್ವೀಪದಲ್ಲೆಲ್ಲ ಸುತ್ತು ಹೊಡೆಯುತ್ತಿದ್ದಂತೆ ನಿಜವಾಗಿಯೂದಾರಿ ತಪ್ಪಿ ಬಿಟ್ಟೆವು. ನನಗಂತೂ ವಿಪರೀತ ಗಾಬರಿಯಾಯಿತು.
ಇದರ ಮದ್ಯೆ ನಮಗೊಂದು ಎತ್ತರ ಧರೆ ಎದುರಾಯಿತು. ರಾಘು ಈ ತರಹದ ಸಮಸ್ಯೆ ಅರಿತವ ನಿಧಾನಕ್ಕೆ ಹತ್ತಿದ. ಧರೆ ತೀರ ಕಡಿದಾಗಿರಲ್ಲಿಲ್ಲವಾದರೂ ಸಣ್ಣ ಸಣ್ಣ ಕಲ್ಲುಗಳಿಂದ ತುಂಬಿತ್ತು. ರಾಘು ಮೇಲೆ ಹತ್ತಿದವನು ಅಲ್ಲಿಂದ ಸಣ್ಣ ಬಳ್ಳಿಯನ್ನು ಇಳಿಸಿದ. ಅದು ನಮಗೆ ಆಧಾರಕ್ಕೆ ಯಾವ ರೀತಿಯಿಂದಲೂ ಸಾಲದಿದ್ದರೂ ಧೈರ್ಯ ಕೊಡಲು ಸಾಕಾಗಿತ್ತು. ನಾನು ಕೆಳಗೆ ಇದ್ದು ಅರುಣನನ್ನು ಹತ್ತಿಸಿದೆ. ನಂತರ ಶರತ್ ಹತ್ತತೊಡಗಿದ. ಆತನ ಭಾರಕ್ಕೆ ಆ ಬಳ್ಳಿ ಹರಿದು ಶರತ್ ಜಾರತೊಡಗಿದ. ನಾನು ತಕ್ಷಣ ಆತ ತೊಟ್ಟಿದ್ದ ಹವಾಯಿ ಚಪ್ಪಲಿಯನ್ನ ಕೆಳಗೆ ಎಸೆಯುವಂತೆ ಹೇಳಿದೆ. ಅವನು ಆಗಲೇ ಆ ಕೆಲಸ ಮಾಡುತ್ತಿದ್ದ. ಕೊನೆಗೆ ಹೇಗೋ ಮತ್ತೆ ಹತ್ತುವಷ್ಟರಲ್ಲಿ ಶರತ್ ನ ಮೈ ಕೈ ತರಚಿ ರಕ್ತ ಒಸರುತ್ತಿತ್ತು. ನಾನು ಭಯದಿಂದ ಹತ್ತಿದೆ. ರಾಘು ಶರತ್ ಗೆ ಪ್ರಥಮ ಚಿಕಿತ್ಸೆ ಅಂತ ಏನೇನೋ ಹಚ್ಹಿದ್ದ. ಅದು ಉರಿಯುತ್ತ್ಇತ್ತು ಅಂತ ಅನ್ನಿಸುತ್ತೆ, ಶರತ್ ನ ಮುಖ ನೋಡಿ ಅಂದುಕೊಂಡೆ. ಧರೆ ಹತ್ತಿದ ಮೇಲೆ ಅರುಣ ತನಗೆ ನಡೆಯಲು ಆಗುತ್ತಿಲ್ಲವೆಂದು ಹೇಳತೊಡಗಿದ. ಕೊನೆಗೆ ನಾವು ಅರ್ಧ ಗಂಟೆ ವಿಶ್ರಮಿಸಿಕೊಂಡೆವು. ಸಂಜೆಯಾಗುತ್ತಿದ್ದಂತೆ ನಾವು ನಿಲ್ಲಿಸಿ ಬಂದ ದೋಣಿಯೇ ಪತ್ತೆಯಾಗಲ್ಲಿಲ್ಲ. ದ್ವೀಪ ದೊಡ್ದದಾಗಿದ್ದುದ್ದರಿಂದ ಸದ್ಯಕ್ಕೆ ರಾತ್ರಿ ಉಳಿಯಲು ಆಸರೆ ಹುಡುಕಬೇಕಿತ್ತು. ಶರತ್, ಅರುಣ nadiya daDadalli ಸುಮ್ಮನೆ ಕಲ್ಲು ಹೊಡೆಯುತ್ತ ಕುಳಿತುಕೊಂಡರು. ನಾನು, ರಾಘು ನಾವು ಯಾವ ಕಡೆಯಿಂದ ಬಂದಿರಬಹುದು ಎಂದು ಯೋಚಿಸತೊಡಗಿದೆವು. ಕೊನೆಗೆ ನದಿಯ ತೀರದಲ್ಲೇ ದ್ವೀಪವನ್ನು ಸುತ್ತು ಹೊಡೆದರೆ ದೋಣಿ ಕಾಣಬಹುದು ಎಂದು ನಿರ್ಧಾರವಾಯಿತು. ಆದರೆ ಈಗಲೇ ಕತ್ತಲೆಯಾಗುತ್ತ ಬಂದಿರುವುದರಿಂದ adu ಅಸಾಧ್ಯವೆಂದು ರಾಘು ಹೇಳಿದ. ಆದ್ದರಿಂದ ನಾವು ಇರಲು ಯಾವುದಾದರು ಆಸರೆ ಸಿಗುತ್ತದೋ ಎಂದು ಹುಡುಕಿ ಹೊರಟೆವು. ಅಂತೂ ಸಂಜೆಯಾಗಿ ಕತ್ತಲು ಮುಸುಕುವ ಮೊದಲು ನಾವೊಂದು ಗುಹೆ ಹುಡುಕಿದೆವು.

ಮುಂದಿನ ಭಾಗದಲ್ಲಿ - ಗುಹೆಯಲ್ಲಿ ಒಂದು ರಾತ್ರಿ

1 comment:

  1. ಸುಧೀ ನಿಮ್ಮ ಸಾಹಸಯಾತ್ರೆ ನಿಜಕ್ಕೂ ಸಾಹಸಮಯವಾಗೇ ಇದೆ.ಮುಂದೇನಾಯಿತೆಂಬ ಕುತೂಹಲವಿದೆ.

    ReplyDelete