ನಮ್ಮ ಸಾಹಸ ಯಾತ್ರೆ - ಹಕ್ಕಿ ಮರಿಯೊಡನೆ ಒಂದು ದಿನ - ಭಾಗ ೩
ನಮ್ಮ ಅಜ್ಜನ ಮನೆಯ ಹಿಂದೆ ತೋಟಕ್ಕೆ ತಾಗಿಕೊಂಡು ಒಂದು ಜಲಪಾತ ಇದೆ. ಅದು ಚಿಕ್ಕ ಜಲಪಾತ. ಬೇಸಿಗೆಯಲ್ಲಿ ಒಣಗಿಕೊಂಡು ಇರುತ್ತಿತ್ತು. ಆದರೆ ಮಳೆಗಾಲದಲ್ಲಿ ಮಾತ್ರ ರೌದ್ರವತಾರ ತಾಳಿ ಕೆಂಪು ನೀರು ಭರ್ರ್ ಎಂದು ಬೀಳುತ್ತಿತ್ತು. ಹೀಗೆ ನೀರು ಬಿದ್ದು ಬಿದ್ದು ಒಂದು ಹೊಂಡವೇ ಉಂಟಾಗಿತ್ತು. ಬೇಸಿಗೆಯಲ್ಲಿ ನಾನು, ಶರತ್ ಮನೆಯಿಂದ ಒಂದು ಟವೆಲ್, ಬಾಟಲಿ ಹಾರಿಸಿಕೊಂಡು ಬಂದು ಮೀನು ಹಿಡಿಯುತ್ತಿದ್ದೆವು. ಹೊಂಡದಲ್ಲಿ ದೊಡ್ಡ ದೊಡ್ಡ ಮೀನುಗಳಿದ್ದರೂ ನಮಗೆ ಸಿಗುತ್ತಿದ್ದಿದ್ದು ಪುಡಿ ಮೀನುಗಳೇ. ಅದನ್ನು ಬಾಟಲಿಗೆ ತುಂಬಿ ಸಂತೋಷ ಪಡುತ್ತಿದ್ದೆವು. ಅವೇನು ಎರಡು ದಿನಕ್ಕಿಂತ ಜಾಸ್ತಿ ಬಾಟಲಿಯಲ್ಲಿ ಬದುಕುತ್ತಿರಲ್ಲಿಲ್ಲ. ಜಲಪಾತದ ಇತ್ತೀಚಿಗಿನ ಫೋಟೋ, ಶರತ್ ತೆಗೆದಿದ್ದು. ಒಂದು ದಿನ ಹೀಗೆ ಮೀನು ಹಿಡಿದು ಸುಸ್ತಾಗಿ ಹಾಗೆ ನೀರಿನಲ್ಲಿ ಬಿದ್ದುಕೊಂಡಿದ್ದೆವು. ಆಗ ಅರುಣ ಜಲಪಾತದ ಮೇಲಿನಿಂದ ಕೂಗುತ್ತಿರುವುದು ಕೇಳಿಸಿತು. ನಾವು ಎನೆದು ಕೇಳಿದೆವು. ಆತ ಬೇಗ ಬನ್ನಿ, ತಾನೊಂದು ಹಕ್ಕಿ ಮರಿ ಹಾರಲಾಗದೆ ಇದ್ದುದನ್ನು ನೋಡಿದೆ ಎಂದ. ಆತ ಕೂದಲು ಕಟ್ ಮಾಡಿಸಿಕೊಂಡು ಬರಲು ಹೋಗಿದ್ದನಂತೆ. ಬರುವಾಗ ದಾರಿಯ ಬದಿ ಬೆಟ್ಟದಲ್ಲಿ ಇದನ್ನು ಕಂಡನಂತೆ. ಇವಿಷ್ಟನ್ನೂ ಆತ ಒಂದೇ ಉಸುರಿಗೆ ಹೇಳಿದ. ನಾನು, ಶರತ್ ಹಾಗೆ ಆಶ್ಚರ್ಯದಿಂದ ಒಂದೇ ಕ್ಷಣದಲ್ಲಿ ಬೆಟ್ಟಕ್ಕೆ ಓಡಿದೆವು. ಅಲ್ಲಿ ನೋಡಿದರೆ ಎಲ್ಲೂ ಹಕ್ಕಿ ಕಾಣಲ್ಲಿಲ್ಲಅರುಣ ಬೆಟ್ಟು ಮಾಡಿ ತೋರಿಸಿದ, ಆದರೂ ಗುರುತಿಸಲಾಗಲ್ಲ...