ನಮ್ಮ ಅಜ್ಜನ ಮನೆಯ ಹಿಂದೆ ತೋಟಕ್ಕೆ ತಾಗಿಕೊಂಡು ಒಂದು ಜಲಪಾತ ಇದೆ. ಅದು ಚಿಕ್ಕ ಜಲಪಾತ. ಬೇಸಿಗೆಯಲ್ಲಿ ಒಣಗಿಕೊಂಡು ಇರುತ್ತಿತ್ತು. ಆದರೆ ಮಳೆಗಾಲದಲ್ಲಿ ಮಾತ್ರ ರೌದ್ರವತಾರ ತಾಳಿ ಕೆಂಪು ನೀರು ಭರ್ರ್ ಎಂದು ಬೀಳುತ್ತಿತ್ತು. ಹೀಗೆ ನೀರು ಬಿದ್ದು ಬಿದ್ದು ಒಂದು ಹೊಂಡವೇ ಉಂಟಾಗಿತ್ತು. ಬೇಸಿಗೆಯಲ್ಲಿ ನಾನು, ಶರತ್ ಮನೆಯಿಂದ ಒಂದು ಟವೆಲ್, ಬಾಟಲಿ ಹಾರಿಸಿಕೊಂಡು ಬಂದು ಮೀನು ಹಿಡಿಯುತ್ತಿದ್ದೆವು. ಹೊಂಡದಲ್ಲಿ ದೊಡ್ಡ ದೊಡ್ಡ ಮೀನುಗಳಿದ್ದರೂ ನಮಗೆ ಸಿಗುತ್ತಿದ್ದಿದ್ದು ಪುಡಿ ಮೀನುಗಳೇ. ಅದನ್ನು ಬಾಟಲಿಗೆ ತುಂಬಿ ಸಂತೋಷ ಪಡುತ್ತಿದ್ದೆವು. ಅವೇನು ಎರಡು ದಿನಕ್ಕಿಂತ ಜಾಸ್ತಿ ಬಾಟಲಿಯಲ್ಲಿ ಬದುಕುತ್ತಿರಲ್ಲಿಲ್ಲ.
ಒಂದು ದಿನ ಹೀಗೆ ಮೀನು ಹಿಡಿದು ಸುಸ್ತಾಗಿ ಹಾಗೆ ನೀರಿನಲ್ಲಿ ಬಿದ್ದುಕೊಂಡಿದ್ದೆವು. ಆಗ ಅರುಣ ಜಲಪಾತದ ಮೇಲಿನಿಂದ ಕೂಗುತ್ತಿರುವುದು ಕೇಳಿಸಿತು. ನಾವು ಎನೆದು ಕೇಳಿದೆವು. ಆತ ಬೇಗ ಬನ್ನಿ, ತಾನೊಂದು ಹಕ್ಕಿ ಮರಿ ಹಾರಲಾಗದೆ ಇದ್ದುದನ್ನು ನೋಡಿದೆ ಎಂದ. ಆತ ಕೂದಲು ಕಟ್ ಮಾಡಿಸಿಕೊಂಡು ಬರಲು ಹೋಗಿದ್ದನಂತೆ. ಬರುವಾಗ ದಾರಿಯ ಬದಿ ಬೆಟ್ಟದಲ್ಲಿ ಇದನ್ನು ಕಂಡನಂತೆ. ಇವಿಷ್ಟನ್ನೂ ಆತ ಒಂದೇ ಉಸುರಿಗೆ ಹೇಳಿದ. ನಾನು, ಶರತ್ ಹಾಗೆ ಆಶ್ಚರ್ಯದಿಂದ ಒಂದೇ ಕ್ಷಣದಲ್ಲಿ ಬೆಟ್ಟಕ್ಕೆ ಓಡಿದೆವು. ಅಲ್ಲಿ ನೋಡಿದರೆ ಎಲ್ಲೂ ಹಕ್ಕಿ ಕಾಣಲ್ಲಿಲ್ಲಅರುಣ ಬೆಟ್ಟು ಮಾಡಿ ತೋರಿಸಿದ, ಆದರೂ ಗುರುತಿಸಲಾಗಲ್ಲಿಲ್ಲ. ಅದು ತರಗೆಲೆಗಳ ಮದ್ಯೆ ಲೀನವಾಗಿತ್ತು. ಸ್ವಲ್ಪ ಹೊತ್ತಿನ ನಂತರ ಅದು ಹೆದರಿತು ಅಂತ ಅನ್ನಿಸುತ್ತೆ, ಓಡಲು ಶುರು ಮಾಡಿತು. ಆಗ ಅದನ್ನು ಕಂಡೆ. ಶರತ್ ಅದನ್ನು ಹಿಡಿಯಲು ಓಡಿದ. ಅದು ಕಾಲು ದಾರಿಯೊಂದನ್ನು ದಾಟಿ ಜಲಪಾತದ ಬುಡಕ್ಕೆ ಬಂತು. ನಾವು ಹೇಗೂ ಹಾರಲು ಬರುವುದಿಲ್ಲ ಈಗ ಸಿಕ್ಕಿಹಾಕಿಕೊಳ್ಳುತ್ತದೆ ಎಂದು ಎಣಿಸುತ್ತಿದ್ದಂತೆ ತೇಲಿಕೊಂಡು ಜಲಪಾತದ ಪಕ್ಕದಲ್ಲಿರುವ ತೋಟಕ್ಕೆ ಇಳಿಯಿತು. ಶರತ್, ಅರುಣ ಅದನ್ನು ಹಿಂಬಾಲಿಸಿಕೊಂಡು ತೋಟಕ್ಕೆ ಇಳಿದರು. ಅವರು ಇಳಿಯುವ ವೇಗ ಕಂಡು ಎಲ್ಲಿ ಇಬ್ಬರು ಬಿದ್ದು ಹಲ್ಲು ಮುರಿದುಕೊಲ್ಲುತ್ತಾರೋ ಎಂದುಕೊಂಡೆ. ಅಷ್ಟರಲ್ಲಿ ಅದು ತೋಟದ ಕಾಪಿ ಗಿಡದ ಬಳಿ ಇಳಿಯಿತು. ನಾನು ಅಲ್ಲಿಗೆ ಓಡಿದೆ, ಆದರೆ ಅದೆಲ್ಲಿ ಕುಟುಕಿಬಿಡುತ್ತದೋ ಎಂದು ಹೆದರಿ ಅದನ್ನು ಹಿಡಿಯಲ್ಲಿಲ್ಲ. ಕೊನೆಗೆ ಶರತ ನೇಅದನ್ನು ಹಿಡಿದ.
ಮುಂದಿನ ಭಾಗದಲ್ಲಿ - ಹಕ್ಕಿ ಏನಾಯ್ತು?
ಬ್ಲಾಗ್ ನಲ್ಲಿ ಕನ್ನಡ ಟೈಪ್ ಮಾಡೋದು ಕೆಟ್ಟ ಅನುಭವ. ಕೆಲವು ಶಬ್ದವೇ ಮಾಯಾ ಆಗಿ ಬಿಡುತ್ತಿದೆ :(
ReplyDeleteಸುಧೀಂದ್ರ...
ReplyDeleteಅನುಭವ ಮಸ್ತ್ ಆಗಿದೆ...
ಎಲ್ಲವನ್ನೂ ಒಂದೆ ಗುಟುಕಿಗೆ ಓದಿದೆ..
ನಿಮ್ಮ ಬರವಣಿಗೆ ಚೆನ್ನಾಗಿದೆ....
ಅಭಿನಂದನೆಗಳು...
ಥ್ಯಾಂಕ್ಸ್ ಪ್ರಕಾಶಣ್ಣ...ನಮ್ಮ ಸಾಹಸ ಯಾತ್ರೆ ಪೂರ್ತಿ ಓದಿ ನಿನ್ನ ಅಭಿಪ್ರಾಯ ತಿಳಿಸು.
ReplyDelete