ಎಂದಿನಂತೆ ಈ ಭಾರಿಯೂ ಸಂತೆಯಲ್ಲಿ ಬಗೆ ಬಗೆಯ ಚಿತ್ರಗಳು ಪ್ರದರ್ಶನಗೊಂಡವು. ಸಂತೆಯಲ್ಲಿ ಸಹಜವಾಗಿ ಹುಳುತಿದ್ದು, ಕೊಳೆತದ್ದು ಮಾಲು ಇರುತ್ತದೆ. ಜಲವರ್ಣದಲ್ಲಿ ಬಗೆ ಬಗೆಯ ಚಿತ್ರಗಳನ್ನ ನೋಡೋ ನಿರೀಕ್ಷೆ ಇಟ್ಟುಕೊಂಡು ಹೋದೊನಿಗೆ ಅಂತಾ ಅದ್ಬುತವಾದದ್ದೇನೂ ಕಾಣಿಸಲ್ಲಿಲ್ಲ. ಮಿಲಿಂದ್ ಮುಲಿಕ್ ರವರ ಚಿತ್ರದ ನಕಲು ತುಂಬಾ ಕಡೆ ಇದ್ದವು. ಇನ್ನು ಎಲ್ಲ ಚಿತ್ರಶಾಲೆಯವರು ಹಂಪಿಗೆ ವಿಧ್ಯಾರ್ಥಿ ಗಳನ್ನು ಕರೆದುಕೊಂಡು ಹೋಗಿ ಚಿತ್ರ ರಚಿಸಲು ಹೇಳುತ್ತಾರೆ ಅನ್ಸುತ್ತೆ. ಎಲ್ಲ ಅಲ್ಲಿಯ ದೃಶ್ಯಗಳೇ ತುಂಬಿತ್ತು. ನೀವು ಖರೀದಿಸುವಾಗ ಈ ವಿಷಯಗಳನ್ನ ಗಮನದಲ್ಲಿಟ್ಟುಕೊಳ್ಳಿ. ಇಂತ ಕಡೆ ಕಣ್ಣಿಗೆ ಸುಂದರವಾಗಿರುವ ಚಿತ್ರಗಳನ್ನ ನೀರೀಕ್ಷಿಸ ಬಹುದೇ ಹೊರತು ಬುದ್ದಿಗೆ ಸುಂದರವಾಗಿರುವುದನ್ನ ನೀರೀಕ್ಷಿಸುವುದು ಸಾದ್ಯವಿಲ್ಲ.
photo enadru idre haaki sir
ReplyDelete