Sunday, November 13, 2016

A village bus stop



Ok. getting the grip again on painting after sometime now. Here is a  village bus stop. It is a sunny day. Hope you like the painting.

Sunday, August 17, 2014

ಸಾಕ್ರೆ ಕಾಯಿರ್, ಪ್ಯಾರಿಸ್


Watercolor painting of Sacre Couer, Paris.
ಜಲವರ್ಣದಲ್ಲಿ ಸಾಕ್ರೆ ಕಾಯಿರ್, ಪ್ಯಾರಿಸ್ 

Sunday, July 15, 2012

Thursday, May 17, 2012

Sunday, January 15, 2012

ಕಂಬಳ


ದಕ್ಷಿಣ ಕನ್ನಡ ದ ಕಂಬಳದ ದೃಶ್ಯ. ನಮ್ಮ office ನಲ್ಲಿ ನಡೆದ ೨೦೧೧ ನೇ ಕನ್ನಡ ರಾಜ್ಯೋತ್ಸವ Painting ಸ್ಪರ್ದೆಯಲ್ಲಿ ಈ ಕಲಾಕೃತಿಗೆ ಮೊದಲನೇ ಬಹುಮಾನ ಬಂದಿದೆ. 

Saturday, December 10, 2011

"Kavimane"-Kuppali


I painted "Kavimane" recently. It is the ancestral house of Kuvempu at Kuppali.

Kuvempu: http://en.wikipedia.org/wiki/Kuvempu

This painting was done on imported sheet. Paper was of superior quality, which gives more flexibility to paint.




Wednesday, March 2, 2011

Nature

Painted in 2004.
Place: Near a village called Talaguppa.

Monday, February 14, 2011

ಮುಪ್ಪು

ಪತ್ರಿಕೆಯಲ್ಲಿ ಬಂದ ಈ ಚಿತ್ರ ನನ್ನ ಗಮನ ಸೆಳೆಯಿತು, ಯಾಕೆಂದರೆ ಊರಲ್ಲಿ ನನ್ನ ಮನೆ ಅಡುಗೆ ಮನೆ ಕಿಟಕಿ ಇದೆ ರೀತಿ ಇದೆ. ಹಾಗಾಗಿ ಇದನ್ನ paint ಮಾಡಿದೆ. 

Friday, February 4, 2011

ಒಂದು ಪ್ರಾತ್ಯಕ್ಷಿಕೆ

ಬಹಳ ಸಮಯದಿಂದ ಚಿತ್ರ ಬಿಡಿಸುವ ಪ್ರಾತ್ಯಕ್ಷಿಕೆ ಪೋಸ್ಟ್ ಮಾಡಬೇಕೆನ್ನುವ ಹಂಬಲ ಇತ್ತು. ಅದು ಈಗ ಸಾಧ್ಯವಾಗುತ್ತಿದೆ.
ಈ ಚಿತ್ರ ಚೆನ್ನಾಗಿ ಬಂದಿಲ್ಲ, ಆದರೆ ಜಲವರ್ಣದ ಪಲುಕುಗಳನ್ನು ಇದರಿಂದ ತಿಳಿಸುವುದ್ದಕ್ಕೇನು ತೊಂದರೆಯಾಗಲಾರದು.

ಮೊದಲನೆ ಹಂತ
ಈ ಹಂತದಲ್ಲಿ sketching ಮುಗಿದಿದೆ. ಸ್ವಲ್ಪ ಭಾಗಕ್ಕೆ ಬಣ್ಣವನ್ನೂ ಹಚ್ಚಿದ್ದೇನೆ.
ಜಲವರ್ಣ dynamic medium ಆದ್ದರಿಂದ ಬೇಗ ಬಣ್ಣಗಳನ್ನು ನಿರ್ದಾರಿಸಬೇಕಾಗುತ್ತದೆ. ಮೊದಲೇ pallet ನಲ್ಲಿ ಬಣ್ಣಗಳನ್ನು ಮಿಶ್ರ ಮಾಡಿಟ್ಟುಕೊಂಡರೆ ಒಳ್ಲೆಯದು.













ಎರಡನೆ ಹಂತ

ಈ ಹಂತದಲ್ಲಿ ಜಾಗ್ರತೆಯಿಂದ ಬಣ್ಣಗಳನ್ನು ಉಪಯೋಗಿಸಬೇಕು. ಒದ್ದೆ ಇದ್ದ ಜಾಗದಲ್ಲಿ ಬಣ್ಣ ಹಚ್ಚಲು ಹೋದರೆ ರಾಡಿಯಾದೀತು. ಆದರೆ ಕೆಲವೊಮ್ಮೆ ಎರಡು ಬಣ್ಣ ಮಿಶ್ರವಾಗುವುದೇ ನಮಗೆ ಬೇಕಾಗಿರುತ್ತದೆ. ಇದು ಅನುಭವದ ಮೇಲೆ ನಿರ್ಧಾರಿಸಬೇಕಾಗುತ್ತದೆ.













 ಕೊನೆಯ ಹಂತ


Final stage (Completed picture)
 ಕೊನೆಯದಾಗಿ ಸೂಕ್ಷ್ಮವಾಗಿರುವ ಭಾಗಗಳನ್ನು ಚಿತ್ರಿಸಬೇಕು. ತಿದ್ದಿ, ತೀಡುವ ಹಂತ ಇದು.

















ವಿವರವಾಗಿ ಬರೆಯಲಾಗಾಲ್ಲಿಲ್ಲ. ಇನ್ನೊಮ್ಮೆ ವಿವಿದ ಹಂತಗಳ ಮೂಲಕ ಇನ್ನೊಂದು ಚಿತ್ರವನ್ನು ವಿವರಿಸುತ್ತೇನೆ.

Sunday, January 30, 2011

ಚಿತ್ರಸಂತೆ-ಕೆಲವು ಅನಿಸಿಕೆಗಳು

ಎಂದಿನಂತೆ ಈ ಭಾರಿಯೂ ಸಂತೆಯಲ್ಲಿ ಬಗೆ ಬಗೆಯ ಚಿತ್ರಗಳು ಪ್ರದರ್ಶನಗೊಂಡವು. ಸಂತೆಯಲ್ಲಿ ಸಹಜವಾಗಿ ಹುಳುತಿದ್ದು, ಕೊಳೆತದ್ದು ಮಾಲು ಇರುತ್ತದೆ. ಜಲವರ್ಣದಲ್ಲಿ ಬಗೆ ಬಗೆಯ ಚಿತ್ರಗಳನ್ನ ನೋಡೋ ನಿರೀಕ್ಷೆ ಇಟ್ಟುಕೊಂಡು ಹೋದೊನಿಗೆ ಅಂತಾ ಅದ್ಬುತವಾದದ್ದೇನೂ ಕಾಣಿಸಲ್ಲಿಲ್ಲ. ಮಿಲಿಂದ್ ಮುಲಿಕ್ ರವರ ಚಿತ್ರದ ನಕಲು ತುಂಬಾ ಕಡೆ ಇದ್ದವು. ಇನ್ನು ಎಲ್ಲ ಚಿತ್ರಶಾಲೆಯವರು ಹಂಪಿಗೆ ವಿಧ್ಯಾರ್ಥಿ ಗಳನ್ನು ಕರೆದುಕೊಂಡು ಹೋಗಿ ಚಿತ್ರ ರಚಿಸಲು ಹೇಳುತ್ತಾರೆ ಅನ್ಸುತ್ತೆ. ಎಲ್ಲ ಅಲ್ಲಿಯ ದೃಶ್ಯಗಳೇ ತುಂಬಿತ್ತು. ನೀವು ಖರೀದಿಸುವಾಗ ಈ ವಿಷಯಗಳನ್ನ ಗಮನದಲ್ಲಿಟ್ಟುಕೊಳ್ಳಿ. ಇಂತ ಕಡೆ ಕಣ್ಣಿಗೆ ಸುಂದರವಾಗಿರುವ ಚಿತ್ರಗಳನ್ನ ನೀರೀಕ್ಷಿಸ ಬಹುದೇ ಹೊರತು ಬುದ್ದಿಗೆ ಸುಂದರವಾಗಿರುವುದನ್ನ ನೀರೀಕ್ಷಿಸುವುದು ಸಾದ್ಯವಿಲ್ಲ.

ಚಿತ್ರಸಂತೆ ೨೦೧೧

ಈ ಸಲದ ಚಿತ್ರಸಂತೆಯಲ್ಲಿ ನನ್ನ ಕೆಲವು ಚಿತ್ರಗಳನ್ನು ಪ್ರದರ್ಶಿಸುವ ಅವಕಾಶ ಸಿಕ್ಕಿತ್ತು.

Saturday, January 22, 2011

ಗೋಕರ್ಣದ ಬೀದಿ

ಗೋಕರ್ಣದಲ್ಲಿ ಎಲ್ಲ ಸಣ್ಣ ಸಣ್ಣ ಬೀದಿಗಳು...ಎಲ್ಲ ಕಡೆ ಗಲೀಜು ಆದರೆ ಒಂದು ತರ ಆಪ್ತವಾದ ಸ್ಥಳ.

Saturday, January 1, 2011

ಭಾವಚಿತ್ರ...


ಚಾರ್ ಕೋಲ್ ಮತ್ತು ಪೆನ್ಸಿಲ್ ನಿಂದ ನನ್ನದೇ ಭಾವಚಿತ್ರ ....